ಹಾಸನಸ ಹುಡುಗ ಮನು ಯುಬಿ ನಿರ್ದೇಶಕರಾಗಿ ಹೊಸ ಪಯಣ ಪ್ರಾರಂಭಿಸಿದರೆ. ಈಗಾಗಲೇ ಕ, ಮೋಜೋ, ನಾನು ನಾನ್ ಜಾನು ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು ಈಗ ನಿರ್ದೇಶನ ಕ್ಷೇತ್ರದಲ್ಲಿ ಸಹ ತಮ್ಮ ಪ್ರತಿಭೆಯನ್ನು ಹೊರಹಾಕಿದ್ದಾರೆ.
ನಾಯಕ ನಟನೆಯನ್ನು ಎಲ್ಲಿ ನಿಲ್ಲಿಸಿಬಿಡುತ್ತಾರೆ ಎನ್ನುವ ತಮ್ಮ ಅಭಿಮಾನಿಗಳಿಗೆ ಸ್ವಲ್ಪ ರೀಲಿಫ್ ಸಿಕ್ಕಿದೆ.
ನಿರ್ದೇಶಕನಾಗಿ ನನ್ನ ಮೊದಲ ಹೆಜ್ಜೆಯನ್ನು ಇಡುತ್ತಿದ್ದೇನೆ. ಖಂಡಿತವಾಗಿ ನಾಯಕನಟನಾಗಿಯೂ ಮುಂದುವರೆಯುತ್ತಿದ್ದೇನೆ. ನಿರ್ದೇಶನ ಖಂಡಿತವಾಗಿಯೂ ನನ್ನ ಕನಸಲ್ಲ. ಸಮಯ ಸಂದರ್ಭಗಳು ನಿರ್ದೇಶನದ ಜವಾಬ್ದಾರಿಯನ್ನೂ ಹೊರುವಂತೆ ಮಾಡಿದೆ. ನಿಮ್ಮಗಳ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಸದಾ ನನ್ನ ಮೇಲಿರಲಿ. ಎಂದು ಹಾಸನ ಸೀಮೆ ಪತ್ರಿಕೆಗೆ ತಿಳಿಸಿದ್ದಾರೆ.
Tags
ಸಿನಿಮಾ