ಸಕಲೇಶಪುರ: ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಆವರಣದಲ್ಲಿ 67ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಶಾಸಕ ಎಚ್.ಕೆ ಕುಮಾರಸ್ವಾಮಿ ರವರ ಅಭಿಮಾನಿಗಳ ಸಹಯೋಗದಲ್ಲಿ ಆಸ್ಪತ್ರೆಗೆ ಬೇಕಾದ ಪರಿಕರಗಳನ್ನು ಒದಗಿಸಲಾಯಿತು.
ನಂತರ ಮಾತನಾಡಿದ ಅವರು ಪ್ರಪಂಚವನ್ನ, ದೇಶವನ್ನು, ನಮ್ಮರಾಜ್ಯವನ್ನು ಕಾಡಿರುವ ಕೊರೋನಾ ಮಹಾಮಾರಿಯನ್ನು ಓಡಿಸಲು ಜನಪ್ರತಿನಿಧಿಗಳು ಸೇರಿದಂತೆ ಎಲ್ಲಾರು ಕೈಜೋಡಿಸಬೇಕಾಗಿದೆ. ಈ ಸಂಧರ್ಭದಲ್ಲಿ ಅನೇಕರು ನೊಂದಿದ್ದು ಕಡು ಬಡವರಿಗೆ, ಕಾರ್ಮಿಕರಿಗೆ, ರೋಗಿಗಳಿಗೆ ಎಲ್ಲಾರು ನೆರವು ನೀಡಲು ಕೈಜೋಡಿಸಬೇಕಾಗಿದೆ. ನನ್ನ ಹುಟ್ಟು ಹಬ್ಬದ ಅಂಗವಾಗಿ ನಾನು ಆಸ್ಪತ್ರೆಗೆ 100 ಪಿಪಿಇ ಕಿಟ್, ಆಕ್ಸಿಮೀಟರ್, ಸ್ಟೀಮರ್ಗಳನ್ನು ನೀಡುತ್ತಿದ್ದೇನೆ ಜೊತೆಗೆ ರೋಗಿಗಳಿಗೆ ಬೇಕಾದ ಬ್ರೆಡ್, ಹಣ್ಣು, ಡ್ರೈಪ್ರೂಟ್ಸ್ ಪುರಸಭಾ ಸದಸ್ಯರು ಹಾಗೂ ಅಭಿಮಾನಿಗಳ ಸಹಯೋಗದಲ್ಲಿ ನೀಡುತ್ತಿದ್ದೇನೆ. ತಾಲೂಕಿನಲ್ಲಿ ಜೈನ್ ಸಮುದಾಯ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸೇವೆ ಸಲ್ಲಿಸುತ್ತಿದ್ದು ಇತರರು ಸಹ ಕೈಜೋಡಿಸಬೇಕಾಗಿದೆ. ಸತತ ಹೋರಾಟದ ಪರಿಣಾಮ ರಾಜ್ಯ ಸರ್ಕಾರ ತಾಲೂಕಿನ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಕಾತಿ ಮಾಡಿರುವುದು ಸಂತೋಷದ ವಿಷಯ, ನೂತನವಾಗಿ ನೇಮಕಗೊಂಡಿರುವ ವೈದ್ಯರು ಕೂಡಲೆ ಸೇವೆ ಸಲ್ಲಿಸಲು ಬರಬೇಕು ಎಂದರು.
ಮಾಜಿ ಜಿ.ಪಂ ಸದಸ್ಯೆ ಚಂಚಲಾ ಕುಮಾರಸ್ವಾಮಿ ಮಾತನಾಡಿ ಶಾಸಕರ ಪ್ರಯತ್ನದಿಂದ ತಾಲೂಕು ಆಸ್ಪತ್ರೆಗೆ 3 ವೈದರನ್ನು ಹಾಗೂ ತಾಲೂಕಿನ ಇತರ ಆರೋಗ್ಯ ಕೇಂದ್ರಗಳಿಗೆ ಸರ್ಕಾರ 8 ಜನ ವೈದ್ಯರನ್ನು ನೇಮಕಾತಿ ಮಾಡಿದೆ. ಶಾಸಕರ ಹುಟ್ಟುಹಬ್ಬದ ಅಂಗವಾಗಿ ವೈಯುಕ್ತಿಕವಾಗಿ ಕೆಲವೊಂದು ಪರಿಕರಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆಂಬುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡಲಾಗುತ್ತದೆ ಎಂದರು.
ಪುರಸಭಾ ಸದಸ್ಯ ಯಾದ್ ಗಾರ್ ಇಬ್ರಾಹಿಂ ಮಾತನಾಡಿ ಸರಳ , ಸಜ್ಜನ ವ್ಯಕ್ತಿತ್ವದ ಕುಮಾರಸ್ವಾಮಿ ಕಳೆದ 13 ವರ್ಷಗಳಿಂದ ಶಾಸಕರಾಗಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ಷೇತ್ರ ದೊಡ್ಡದಾಗಿದ್ದರು ಸಹ ಎಲ್ಲಡೆ ತಿರುಗಾಡಿ ಕೊರೋನಾ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವ ಅವರ ಹುಟ್ಟುಹಬ್ಬದ ಅಂಗವಾಗಿ ಭಗವಂತ ಅವರಿಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಜನಸೇವೆ ಮಾಡುವ ಶಕ್ತಿ ಕೊಡಲಿ ಎಂದರು.
ಈ ಸಂಧರ್ಭದಲ್ಲಿ ಪುರಸಭಾ ಅಧ್ಯಕ್ಷ ಕಾಡಪ್ಪ,ಎಪಿಎಂಸಿ ಅಧ್ಯಕ್ಷ ಕವನ್ ಗೌಡ, ಪುರಸಭಾ ಸದಸ್ಯರುಗಳಾದ ಉಮೇಶ್, ಮೋಹನ್,ಸಮೀರ್, ಪ್ರಜ್ವಲ್, ಜೆಡಿಎಸ್ ಮುಖಂಡರುಗಳಾದ ಜೈಭೀಮ್ ಮಂಜು, ಅಸ್ಲಾಂ, ಹಸೈನಾರ್, ಭಾಸ್ಕರ್, ತಾಲೂಕು ವೈದ್ಯಾಧಿಕಾರಿ ಡಾ.ಹೇಮಂತ್, ಕ್ರಾಫರ್ಡ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಧುಸೂಧನ್ ಸೇರಿದಂತೆ ಇತರರು ಹಾಜರಿದ್ದರು.
Tags
ಸಕಲೇಶಪುರ