ಅರಸೀಕೆರೆ: ನಗರದ ತಾಲ್ಲೂಕು ಸರ್ಕಾರಿ ಜೆ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಸೋಂಕಿತ ಯುವಕ ಭಾನುವಾರ ವಾರ್ಡ್‌ನ ಶೌಚಾಲಯದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಗರ ಹೊರವಲಯದ ಮಾಲೇಕಲ್ ತಿರುಪತಿ ಗ್ರಾಮದ ಸಮೀಪವಿರುವ ಕಾರೇಹಳ್ಳಿ ತಾಂಡ್ಯ ಗ್ರಾಮದ ಪ್ರಕಾಶ್ ನಾಯ್ಕ್ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕೋವಿಡ್ ಸೋಂಕಿತರಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಕಾಶ್ ಗುಣಮುಖರಾಗಿದ್ದು ಸೋಮವಾರ ಬಿಡುಗಡೆಯಾಗಲಿದ್ದರು. ಆಸ್ಪತ್ರೆ ಸಿಬ್ಬಂದಿ ಕಣ್ತಪ್ಪಿಸಿ ಮನೆಗೆ ಹೋಗಿದ್ದ ಅವರನ್ನು ಅವರ ಮನೆಯವರೇ ಪುನಃ ಕರೆದು ತಂದು ಸರ್ಕಾರಿ ಆಸ್ಪತ್ರೆಗೆ ಬಿಟ್ಟು ಹೋಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಇವರ ಪತ್ನಿಯೂ ಕೂಡ ಸೋಂಕಿತರಾಗಿದ್ದು, ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಸಂತೋಷ್ ಕುಮಾರ್, ಶಾಸಕ ಕೆ.ಎಂ.ಶಿವಲಿಂಗೇಗೌಡ ಭೇಟಿ ನೀಡಿ ಪರಿಶೀಲಿಸಿದರು.
Tags
ಅರಸೀಕೆರೆ
