ಭಾರತೀಯ ಮಹಿಳಾ ಕುಸ್ತಿಪಟು ಪ್ರಿಯಾ ಮಲಿಕ್‌ ಗೆ ಚಿನ್ನದ ಪದಕ

ಹಂಗೇರಿ(ಜು.25): ಒಂದು ಕಡೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದಾರೆ. ಇಂದು ಭಾರತದ ಮತ್ತೊಬ್ಬ ಕುಸ್ತಿ ತಾರೆ ಪ್ರಿಯಾ ಮಲಿಕ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ಹೌದು, ಹಂಗೇರಿಯಾದಲ್ಲಿ ನಡೆಯುತ್ತಿರುವ ಕೆಡೆಟ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಮಹಿಳಾ ಕುಸ್ತಿಪಟು ಪ್ರಿಯಾ ಮಲಿಕ್‌ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರವಷ್ಟೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು 49 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 202 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದರು. ಇದೀಗ ದಿನ ಬೆಳಗಾಗುವಷ್ಟರಲ್ಲಿ ಪ್ರಿಯಾ ಮಲಿಕ್‌ ಕುಸ್ತಿ ಅಖಾಡದಲ್ಲಿ ಭಾರತದ ಬಾವುಟ ಮಿನುಗುವಂತೆ ಮಾಡಿದ್ದಾರೆ.

Advertisement

Advertisement




Post a Comment

Previous Post Next Post