ಖ್ಯಾತ ನಟಿಯ ಕಾರು ಅಪಘಾತ

ಚೆನ್ನೈ: ಖ್ಯಾತ ನಟಿ ಯಶಿಕಾ ಆನಂದ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಸ್ನೇಹಿತೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಚೆನ್ನೈನಲ್ಲಿ ನಡೆದಿದೆ.

ತಮಿಳು, ತೆಲುಗು ಸಿನಿಮಾದಲ್ಲಿ ನಟಿಸಿದ ನಟಿ ಯಶಿಕಾ ಆನಂದ್ ಅವರು ತಮ್ಮ ಸ್ನೇಹಿತರ ಜೊತೆ ಮಹಾಬಲಿಪುರಂನಿಂದ ಚೆನ್ನೈಗೆ ಪ್ರಯಾಣ ಮಾಡುತ್ತಿದ್ದ ವೇಳೆ ಈ ಆ್ಯಕ್ಸಿಡೆಂಟ್ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಯಶಿಕಾ ಅವರಿಗೆ ಗಂಭೀರ ಗಾಯಗಳಾಗಿವೆ. ಅವರ ಜೊತೆ ಪ್ರಯಾಣ ಮಾಡುತ್ತಿದ್ದ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿ ಆಗಿದೆ. ಯಶಿಕಾ ಆನಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.


ಮೂಲಗಳ ಪ್ರಕಾರ, ಯಶಿಕಾ ಆನಂದ್ ಮತ್ತು ವಲ್ಲಿಚೆಟ್ಟಿ ಭವಾನಿ ಅವರು ಇನ್ನಿಬ್ಬರು ಪುರುಷ ಸ್ನೇಹಿತರ ಜೊತೆ ಮಹಾಬಲಿಪುರಂನಿಂದ ಚೆನ್ನೈಗೆ ಮರಳುತ್ತಿದ್ದರು. ಭವಾನಿ ಅವರು ಅಮೆರಿಕದಲ್ಲಿ ಸಾಫ್ಟ್‍ವೇರ್ ಕಂಪನಿ ಉದ್ಯೋಗಿ ಆಗಿದ್ದರು. ಈಸ್ಟ್ ಕೋಸ್ಟ್ ರೋಡ್‍ನಲ್ಲಿ ಶನಿವಾರ (ಜು.24) ರಾತ್ರಿ 11.45ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದಿದೆ. ಕಾರು ಪಲ್ಟಿ ಆಗಿ ಎಲ್ಲರಿಗೂ ತೀವ್ರ ಗಾಯಗಾಳಾಗಿವೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಯಶೀಕಾ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಮೃತರಾದರು ಎಂಬ ಸುದ್ದಿ ಕೇಳಿಬಂದಿದೆ.

Advertisement


ಪ್ರಥಮ ಚಿಕಿತ್ಸೆ ಬಳಿಕ ಯಶಿಕಾ ಆನಂದ್ ಮತ್ತು ಸ್ನೇಹಿತರನ್ನು ಚೆನ್ನೈನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅಪಘಾತ ಸಂಬಂಧ ಮಹಾಬಲಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಅತಿ ವೇಗವಾಗಿ ಕಾರು ಚಾಲನೆ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಡ್ರಂಕ್ ಆ್ಯಂಡ್ ಡ್ರೈವ್ ಅನುಮಾನ ಕೂಡ ಮೂಡಿದೆ. ವಿಜಯ್ ದೇವರಕೊಂಡ ನಟನೆಯ ನೋಟಾ, 2019ರಲ್ಲಿ ಬಂದ ಜೋಂಬಿ ಮುಂತಾದ ಸಿನಿಮಾಗಳಲ್ಲಿ ಯಶಿಕಾ ಆನಂದ್ ಅಭಿನಯಿಸಿದ್ದಾರೆ.

Advertisement


Post a Comment

Previous Post Next Post