ಬೇಲೂರು: ತಾಲ್ಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿಗೆ ಒಳಪಡುವ ಹೊಸಮನೆಹಳ್ಳಿ ಗ್ರಾಮ ಜನಪ್ರತಿನಿಧಿಗಳ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕ್ಕೆ ಒಳಗಾಗಿದೆ.
ಕಳೆದ ೫೦ ವರ್ಷದಿಂದ ರಸ್ತೆ, ಚರಂಡಿ ಕಂಡಿಲ್ಲದ ಈ ಗ್ರಾಮದ ರಸ್ತೆಯು ಕೆಸರಿನಗದ್ದೆಯಂತಾಗಿದ್ದು ಗ್ರಾಮಸ್ಥರು ರಸ್ತೆಯ ಮಧ್ಯದಲ್ಲಿ ಬಾಳೆಗಿಡ ನೆಡುವ ಮೂಲಕ ಪ್ರತಿಭಟನೆ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಹೊಸಮನೆಹಳ್ಳಿ ಗ್ರಾಮದ ಮುಖಂಡ ವೆಂಕಟೇಗೌಡ, ನನಗೀಗ ೬೫ ವರ್ಷವಾಗಿದ್ದು ನಾನು ಚಿಕ್ಕವನಿದ್ದಾಗಿನಿಂದ ಗ್ರಾಮದ ರಸ್ತೆ ಇದೆ ಸ್ಥಿತಿಯಲ್ಲಿದೆ. ಚುನಾವಣೆ ಬಂದಾಗ ಆಶ್ವಾಸನೆ ಕೊಟ್ಟು ಓಟು ಪಡೆದುಹೋಗುತ್ತಾರೆ. ಯಾವ ಸರ್ಕಾರ ಬಂದರೂ ರಸ್ತೆ ಕೆಲಸ ಮಾಡಿಸಲಿಲ್ಲ. ಕಳೆದ ವರ್ಷ ಮಾಜಿ ಮೆಂಬರ್ ಪರಮೇಶ್ ಎಂಬುವರು ಮಾಡಿಸುವುದಾಗಿ ಹೇಳಿದ್ದರು ಮಾಡಿಸಲಿಲ್ಲ. ಹೆಂಗಸರು, ಮಕ್ಕಳು ಚಪ್ಪಲಿ ಹಾಕಿಕೊಂಡು ತಿರುಗಾಡಿದರೆ ಕೆಸರಿನಲ್ಲಿ ಹೂತು ಹೋಗುತ್ತದೆ. ಜಿ.ಪಂ. ಸದಸ್ಯರಾಗಲಿ, ತಾಲ್ಲೂಕು ಪಂಚಾಯಿತಿ ಸದಸ್ಯರಾಗಲಿ ರಸ್ತೆ ಕೆಲಸ ಮಾಡಿಸಿಲ್ಲ ಎಂದು ಆರೋಪಿಸಿದರು.
ಮಂಜೇಗೌಡ ಮಾತನಾಡಿ, ಸೊಳ್ಳೆ ಹೆಚ್ಚಾಗಿದೆ, ಮೊದಲೆ ಕೊರೊನಾ ಆತಂಕ, ೫೦ ವರ್ಷವಾದರೂ ರಸ್ತೆ, ಚರಂಡಿ ಕೆಲಸ ಮಾಡಿಸಿಲ್ಲ. ರಾಜಕಾರಣಿಗಳು ಎಲೆಕ್ಷನ್ ಸಂದರ್ಭ ಭರವಸೆ ಕೊಡುತ್ತಾರೆ. ನಂತರ ತಿರುಗಿ ನೋಡುವುದಿಲ್ಲ. ಚರಂಡಿಯಲ್ಲಿ ನೀರು ನಿಂತು ಸೊಳ್ಳೆನಿಂತು ರೋಗಗಳು ಬರುತ್ತಿದೆ. ಡೆಂಗ್ಯು ಜ್ವರ ಬಂದಿದೆ. ಮಳೆಗಾಲ ಬಂದಾಗ ನರಕವಾಗಲಿದೆ. ಜೀವನವೆ ಬೇಡ ಎನಿಸಿದೆ.
![]() |
| Advertisement |
ಮಹಿಳೆ ಮಾತನಾಡಿ, ಮನೆ ಕಟ್ಟಿ ೨೦ ವರ್ಷವಾಯಿತು. ರಸ್ತೆ ಕೆಸರು ಗದ್ದೆಯಾಗಿದೆ. ಓಟು ಪಡೆಯಲು ಏನೆಲ್ಲಾ ಸಬೂಬು ಹೇಳಿ ಓಟು ಪಡೆದು ಹೋಗುತ್ತಾರೆ. ಹೊಸಮನೆಹಳ್ಳಿಯಲ್ಲಿ ವಾಸಿಸುವುದೆ ಬೇಡವೆನ್ನುವಷ್ಟು ಬೇಸರವಾಗಿದೆ. ಈ ಭಾಗದ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಕೇಳದಂತಾಗಿದ್ದಾರೆAದು ದೂರಿದರು. ಸುಬ್ರಹ್ಮಣ್ಯ ಮಾತನಾಡಿ, ನಾವು ಮನೆ ಕಟ್ಟಿ ೮ ವರ್ಷವಾಯಿತು. ಬೈಕ್, ಬೈಸಿಕಲ್ ಈ ರಸ್ತೆಯಲ್ಲಿ ಓಡಿಸಲಾಗುತ್ತಿಲ್ಲ. ನಡೆದು ಬಂದರೆ ಪಾದ ಹೂತುಕೊಳ್ಳಲಿದೆ. ರಸ್ತೆ, ಚರಂಡಿ ಕೆಲಸ ಮಾಡಿಸುವಂತೆ ಅರ್ಜಿಕೊಟ್ಟು ಕೊಟ್ಟು ಸಾಕಾಗಿದೆ ಎಂದು ನೋವು ವ್ಯಕ್ತಪಡಿಸಿದರು.
![]() |
| Advertisement |


