ಬೇಲೂರು: ಮಹಿಳೆಯೊಬ್ಬರಿಗೆ ಹೆವಿಡೋಸೇಜ್ ಇಂಜಕ್ಷನ್ ನೀಡಿದ್ದರಿಂದ ರಿಯಾಕ್ಷನ್ ಆಗಿ ಮೈಯಲ್ಲಿ ಗುಳ್ಳೆಗಳು ಬಂದಿರುವ ಘಟನೆ ಇಲ್ಲಿನ ನೆಹರೂನಗರದ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ನಡೆದಿದೆ.
![]() |
| ಬೇಲೂರಿನ ಹೊಲಿಕ್ರಾಸ್ ಆಸ್ಪತ್ರೆ ಬಳಿ ಪತ್ನಿಯ ಪರವಾಗಿ ನರ್ಸ್ ಅವರೊಂದಿಗೆ ಚರ್ಚೆ ನಡೆಸುತ್ತಿರುವ ಅಸ್ಲಾಂಪಾಷ. ಪಿಎಸ್‌ಐ ಹೆಚ್.ಜಿ.ಪಾಟೀಲ್ ಇದ್ದಾರೆ |
ಗುಳ್ಳೆಗಳು ಬಂದ ಮಹಿಳೆ ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹಾಸನ ಆಸ್ಪತ್ರೆಗೆ ತೆರಳಿ ಹೆಚ್ಚಿನ ಚಿಕಿತ್ಸೆ ಪಡೆದಿದ್ದಾರೆ. ಇದೀಗ ಆರೋಗ್ಯ ಸುಧಾರಿಸತೊಡಗಿದೆ.
ವಿವರ: ಈ ಬಗ್ಗೆ ಮಾಹಿತಿ ನೀಡಿದ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಅಸ್ಲಾಂಪಾಷ ಅವರು, ನನ್ನ ಪತ್ನಿ ಹೊಟ್ಟೆನೋವೆಂದು ತಿಳಿಸಿದರು. ಈ ಹಿಂದೆ ಚಿಕಿತ್ಸೆ ಕೊಡಿಸಿದ್ದರಿಂದ ಹಳೆಯ ಚೀಟಿಯೊಂದಿಗೆ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ನನ್ನಲ್ಲಿದ್ದ ಚೀಟಿಯನ್ನು ನೋಡಿದ ನರ್ಸ್ ಒಂದೆ ಸಲ ೪ ಇಂಜಕ್ಷನ್ ಕೊಟ್ಟು ಮನೆಗೆ ಹೋಗುವಂತೆ ಸೂಚಿಸಿದರು.
ಮನೆಗೆ ಹೋದ ಕೆಲವೆ ನಿಮಿಷಗಳಲ್ಲಿ ಮೈಯಲ್ಲೆಲ್ಲಾ ಗುಳ್ಳೆಗಳಾದವು. ರಿಯಾಕ್ಷನ್ ಆಗಿರಬಹುದೆಂದು ಆಸ್ಪತ್ರೆಗೆ ಫೋನ್ ಮಾಡಿದರು ಫೋನ್ ರಿಸೀವ್ ಮಾಡಲಿಲ್ಲ. ಇದರಿಂದ ಆತಂಕಗೊAಡ ನಾನು ಪತ್ನಿಯನ್ನು ಪುನಃ ಹೋಲಿಕ್ರಾಸ್ ಆಸ್ಪತ್ರೆಗೆ ಕರೆತಂದೆ. ರಿಯಾಕ್ಷನ್ ಆಗಿದ್ದರಿಂದ ಏನೇನೋ ಚಿಕಿತ್ಸೆ ಮಾಡಿದರೂ ಪ್ರಯೋಜನವಾಗಲಿಲ್ಲ. ನಂತರ ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಅಲ್ಲಿನ ವೈದ್ಯರು, ರಿಯಾಕ್ಷನ್ ಹೆಚ್ಚಾಗಿರುವುದರಿಂದ ಹೆಚ್ಚುವರಿ ಚಿಕಿತ್ಸೆ ಅಗತ್ಯವಿದ್ದು ಹಾಸನಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಹಾಸನಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಬಂದಿದ್ದೇನೆ.
![]() |
| Advertisement |
ಕೊರೊನಾದ ಆತಂಕದಿಂದ ಸರ್ಕಾರಿ ಆಸ್ಪತ್ರೆಗೆ ತೆರಳದೆ ವಿವಿಧ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗೆ ಬಂದಾಗ ಹೆವಿ ಡೋಸ್ ನೀಡುವುದರ ಜೊತೆಗೆ ಬಿಲ್‌ಗಿಂತಲೂ ಹೆಚ್ಚು ಹಣ ಪಡೆಯುತ್ತಾರೆ ಎಂದು ಆರೋಪಿಸಿದರು. ವಿಷಯ ತಿಳಿದ ಬೇಲೂರು ಪೊಲೀಸ್ ಪಿಎಸ್‌ಐ ಹೆಚ್.ಜಿ.ಪಾಟೀಲ್ ಸರ್ ಅವರು ಆಸ್ಪತ್ರೆಗೆ ಆಗಮಿಸಿ, ವೈದ್ಯರು ಇಲ್ಲದಿದ್ದಾಗ ಏಕೆ ಚಿಕಿತ್ಸೆ ಕೊಡುತ್ತೀರಿ ಎಂದು ನರ್ಸ್ಗಳಿಗೆ ಬುದ್ದಿಮಾತು ಹೇಳಿದರು. ಈ ರೀತಿ ನಡೆದುಕೊಂಡ ನರ್ಸ್ಗಳ ಮೇಲೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.


