ನ್ಯಾಯಾಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನ

 ಹಾಸನ ಸೆ.24(ಕರ್ನಾಟಕ ವಾರ್ತೆ):- ಬೇಲೂರು ತಾಲ್ಲೂಕಿನ ಅರೇಹಳ್ಳಿ ಗ್ರಾಮದ ಕೇಶವನಗರ ಮತ್ತು ಉಲ್ಲಾಸನಗರ ಬಡಾವಣೆಗಳಿಗೆ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

     ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ(ನಿಯಂತ್ರಣ) ತಿದ್ದುಪಡಿ ಆದೇಶ 2016 ಮತ್ತು(ತಿದ್ದುಪಡಿ) ಆದೇಶ 2017, 2018 ಮತ್ತು 2020 ರ ಕ್ಲಾಸ್ -6(ಬಿ) ರ ಪ್ರಕಾರ ಹೊಸ ನ್ಯಾಯಬೆಲೆ ಅಂಗಡಿ ಪ್ರಾಧಿಕಾರ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಆದ್ಯತಾ ಕ್ರಮದಲ್ಲಿರುವವರಿಗೆ ಮಾತ್ರ ಅವಕಾಶ ಇರುತ್ತದೆ.


    ರಾಜ್ಯ ಸರ್ಕಾರದ ಸಾಮ್ಯಕೊಳಪಟ್ಟ ನಿಗಮ/ಸಂಸ್ಥೆಗಳು/ಗ್ರಾಮ ಪಂಚಾಯಿತಿಗಳು/ ನಗರ ಸ್ಥಳೀಯ ಸಂಸ್ಥೆಗಳು, 

ಸಹಕಾರ ಸಂಘಗಳು: ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘಗಳು(ಟಿ.ಎ.ಪಿ.ಸಿ.ಎಮ್.ಎಸ್), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪಿ.ಎ.ಸಿ.ಸಿ.ಎಸ್), ತೋಟಗಾರಿಕಾ ಬೆಳೆಗಾರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣ ಸಂಘ ನಿಯಮಿತ(ಹಾಪ್ ಕಾಮ್ಸ್), ನೋಂದಾಯಿತ ಸಹಕಾರ ಸಂಘಗಳು, ನೋಂದಾಯಿತ ಪ್ರಾಥಮಿಕ ಗ್ರಾಹಕರ ಸಹಕಾರ ಸಂಘಗಳು, ಆದಿವಾಸಿ ವಿವಿಧೋದ್ದೇಶ ಸಹಕಾರ ಸಂಘಗಳು, ನೋಂದಾಯಿತ ನೇಯ್ಗೆ ಸಹಕಾರ ಸಂಘಗಳು, ನೋಂದಾಯಿತ ಮಹಿಳೆಯರ ವಿವಿಧೋದ್ದೇಶ ಸಹಕಾರ ಸಂಘಗಳು ನೋಂದಾಯಿತ ವಿವಿದೋದ್ದೇಶ ಸಹಕಾರ ಸಂಘಗಳ ಅಂಗವಿಕಲರ ಕಲ್ಯಾಣ ಸಹಕಾರ ಸಂಘಗಳು, ಸಹಕಾರ ಸಂಘಗಳು ನಡೆಸುತ್ತಿರುವ ಬ್ಯಾಂಕುಗಳು ಅಥವಾ ಸಹಕಾರ ಬ್ಯಾಂಕುಗಳು, ಸ್ತ್ರೀ ಶಕ್ತಿ ಗುಂಪುಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳು(ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯಿಂದ ಗುರುತಿಸಲ್ಪಟ್ಟಿರಬೇಕು)

Advertisement

ವೈಯಕ್ತಿಕ :- ಅಂಗವಿಕಲರಿಗೆ, ತೃತೀಯಲಿಂಗಿಗಳಿಗೆ.


ಅರ್ಜಿ ಸಲ್ಲಿಸಲು ಷರತ್ತುಗಳು

ಸಹಕಾರ ಸಂಘಗಳು 3 ವರ್ಷ ವಹಿವಾಟಿನ ಬಗ್ಗೆ ಆಡಿಟ್ ವರದಿ ಸಲ್ಲಿಸುವುದು. ಈ ಸಹಕಾರ ಸಂಘಗಳ ಅರ್ಹತೆಯನ್ನು ಗುಣಮಟ್ಟವನ್ನು ನಿರ್ಧರಿಸಲು ಸದರಿ ಸಂಘಗಳಿಗೆ ನೀಡಲಾದ ಆಡಿಟ್ ಗ್ರೇಡ್ ಎ, ಬಿ ಹಾಗೂ ಸಿ ಯನ್ನು ಪರಿಗಣಿಸಲ್ಪಡುವುದು. 


      ಸಹಕಾರ ಸಂಘವು ಕನಿಷ್ಠ ಮೂರು ವರ್ಷದಿಂದ ಚಾಲನೆಯಲ್ಲಿದ್ದು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕನಿಷ್ಠ ಎರಡು ಲಕ್ಷ ರೂಪಾಯಿಗಳ(2,00000) ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು. ಈ ಬಗ್ಗೆ ದಾಖಲಾತಿ ಸಲ್ಲಿಸಬೇಕು.

    ಪಡಿತರ ಸಂಗ್ರಹಣೆಗೆ 20ಘಿ30ಅಳತೆಯ ಅಗತ್ಯ ಗೋದಾಮು ಸೌಲಭ್ಯವನ್ನು ಹೊಂದಿರಬೇಕು, ಇಲ್ಲವೆ ಖಾಸಗಿ ಗೋದಾಮು ಪಡೆದಿದ್ದಲ್ಲಿ ಪೂರಕ ದಾಖಲೆ ಸಲ್ಲಿಸಬೇಕು. ಪಡಿತರ ಎತ್ತುವಳಿ ಮತ್ತು ನಿರ್ವಹಣೆಗೆ ಸಂಘದಲ್ಲಿ ಲಭ್ಯವಿರುವ ಅಗತ್ಯ ಸಿಬ್ಬಂದಿ ವಿವರ (ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ ಮಾಹಿತಿ ಕಡ್ಡಾಯ) ಸಲ್ಲಿಸಬೇಕು. ಅಗತ್ಯ ವಸ್ತುಗಳ ಕಾಯಿದೆ 1955 ರ ಅಡಿ ಸದರಿ ಸಂಸ್ಥೆ ವಿರುದ್ಧ ಯಾವುದೇ ಮೊಕ್ಕದ್ದಮೆ ದಾಖಲಾಗಿರಬಾರದು ಹಾಗೂ ಈ ಹಿಂದೆ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದು ರದ್ದಾಗಿರಬಾರದು. 

Advertisement


   ಸರ್ಕಾರದ ಆದೇಶದನ್ವಯ ನೇರ ನೇಮಕಾತಿಗೆ ಅರ್ಹತೆ ಹೊಂದಿರುವವರು ನ್ಯಾಯಬೆಲೆ ಅಂಗಡಿ ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ಈ ಪ್ರಕಟಣೆ ರದ್ದಾಗುವುದು. ಅರ್ಜಿಗಳನ್ನು ಸಂಬಂಧಪಟ್ಟ ತಾಲ್ಲೂಕಿನ ತಹಸೀಲ್ದಾರ್ ಕಚೇರಿಗೆ ಈ ಪ್ರಕಟಣೆ ಹೊರಡಿಸಿದ ದಿನಾಂಕದಿಂದ ಒಂದು ತಿಂಗಳೊಳಳಗಾಗಿ ನಿಗದಿತ ನಮೂನೆ “ಎ” ರಲ್ಲಿ ನಿಗದಿಪಡಿಸಿದ ದಾಖಲೆಗಳೊಂದಿಗೆ ಸಲ್ಲಿಸತಕ್ಕದ್ದು. 


ಈ ಷರತ್ತಿಗೆ ಒಳಪಟ್ಟು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಘ ಸಂಸ್ಥೆಗಳು ಅಥವಾ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ನಿಗದಿತ ನಮೂನೆಯಲ್ಲಿ ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ಈ ಪ್ರಕಟಣೆ ಹೊರಡಿಸಿದ ಒಂದು ತಿಂಗಳ ಒಳಗೆ  ಈ ಕಚೇರಿಗೆ ಸಲ್ಲಿಸುವುದು ಅವಧಿ ಮೀರಿ ಬಂದ ಅರ್ಜಿಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

Post a Comment

Previous Post Next Post