ರಸ್ತೆಯಲ್ಲಿ ವಿದ್ಯುತ್ ಪರಿವರ್ತಕ ನಿವಾಸಿಗಳ ಅಕ್ರೋಷ ದಶಕಗಳ ಸಮಸ್ಯೆ ಪರಿಹಾರ ಎಂದು!??

  ಜಾವಗಲ್: ಗ್ರಾಮದ ಜನತಾ ಬಡಾವಣೆಯಲ್ಲಿ

ಈ ಹಿಂದೆ ಇದ್ದಂತಹ ಅಧಿಕಾರಿಗಳ ಬೇಜವಾಬ್ದಾರಿ

ವರ್ತನೆಯಿಂದ ಸುಮಾರು ನೂರೈವತ್ತು ಕುಟುಂಬ

ಗಳು ಸಮಸ್ಯೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ, ಈ ಬಡಾವಣೆಗೆ ಹಾಗೂ ಕರ್ನಾಟಕ ವಿದ್ಯಾಸಂಸ್ಥೆಗೆ ಸಂಪರ್ಕ ಕಲ್ಪಿಸುವ ರಸ್ತೆ

ಯ ಮಧ್ಯಭಾಗದಲ್ಲಿ  ಎರಡು ವಿದ್ಯುತ್ ಪರಿವರ್ತಕ ಅಳವಡಿಸಿ ವಾಹನ ಸಂಚಾರಕ್ಕೆ ಹಾಗೂ ಪಾದಾ

ಚಾರಿ ಸಂಚಾರಕ್ಕೆ ತೊಂದರೆ ಆಗಿದೆ ಸಾಕಷ್ಟು ಭಾರಿ

ವಿದ್ಯುತ್ ಇಲಾಖೆ ಹಾಗೂ ಗ್ರಾಮ ಪಂಚಾಯತಿಗೆ

ಮನವಿ ಮಾಡಿದರು ಕೂಡ ಸಮಸ್ಯೆ ಬಗೆ ಹರಿಸದೆ

ಜಾಣಮೌನ ತಾಳಿರುವುದು ಸ್ಥಳೀಯರ ಅಕ್ರೋಷಕ್ಕೆ ಕಾರಣವಾಗಿದೆ, ಕೂಡಲೇ ಸಂಭಂದಪಟ್ಟ ಇಲಾಖೆ ಸಮಸ್ಯೆ ಬಗೆಹರಿಸದಿದ್ದರೆ



ಸ್ಥಳೀಯ ನಿವಾಸಿಗಳು ವಿದ್ಯುತ್ ಇಲಾಖೆಯ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

     ಮಾಜಿ ಗ್ರಾ ಪಂ ಸದಸ್ಯೆ ರತ್ನಮ್ಮ ಮಾತನಾಡಿ

ನೂರಾರು ಜನರಿಗೆ ತೊಂದರೆ ಆಗುತ್ತಿದೆ ಪ್ರತಿನಿತ್ಯ ನೂರಾರು

ವಿದ್ಯಾರ್ಥಿಗಳು ಈ ರಸ್ತೆಯ ಮುಖೇನ ಶಾಲೆಗೆ 

ಹೋಗಬೇಕಾಗಿದೆ ಈ ಸಮಸ್ಯೆ ಪ್ರಾರಂಭವಾಗಿ ದಶಕಗಳೇ ಕಳೆದಿದೆ, ಈಗಾಗಲೇ ಈ ಪರಿವರ್ತಕ

ದಿಂದ ಮೂರು ಮೂಕ ಪ್ರಾಣಿಗಳಾದ ಹಸು , ಎಮ್ಮೆ

ಹಸುನೀಗಿವೆ ಇಷ್ಷಾದರು ಕೂಡ ಜನಪ್ರತಿನಿಧಿಗಳು

ವಿದ್ಯುತ್ ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ

ವೆಂದು ತಮ್ಮ ಅಳಲನ್ನು ತೊಡಿಕೊಂಡರು.



       ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕರಾದ ಕಿಶೋರ್ ಮಾತನಾಡಿ ಇದು

ಒಂದೇ ರಸ್ತೆಯಲ್ಲಿ ಎರಡು ವಿದ್ಯುತ್ ಪರಿವರ್ತಕ

ಇರುವುದರಿಂದ ಒಂದು ಬೈಕು ಕೂಡ ಓಡಾಡಲು

ಸಾಧ್ಯವಾಗುತ್ತಿಲ್ಲ, ಈಗಾಗಲೇ ಸಂಭಂದ ಪಟ್ಟ ವಿದ್ಯುತ್ ಇಲಾಖೆಗೆ ಹತ್ತರಿಂದ ಹದಿನೈದು ಭಾರಿ

ಮನವಿ ಮಾಡಿದ್ದೆವೆ ಪ್ರಯೋಜನವಾಗಿಲ್ಲ ಕೂಡಲೇ

ಸಂಭಂದಪಟ್ಟ ಮೇಲಾಧಿಕಾರಿಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲೆಂದರು

        ಈ ಸಂದರ್ಭದಲ್ಲಿ ನಿವಾಸಿ ಜಾಫರ್, ಪ್ರದೀಪ್

ಮಹಿಳೆಯರಾದ ಸಲ್ಮಾ ,ತಾಸಿನಾ ಮತ್ತಿತರರು ಉಪಸ್ಥಿತಿಯಿದ್ದರು.

Post a Comment

Previous Post Next Post