ಹೊಳೆನರಸೀಪುರದ ಕಾರು ಚಾಲಕ ಕುಣಿಗಲ್ ಹೊರ ವಲಯದಲ್ಲಿ ಡಿವೈಡರ್ ಗೆ ಢಿಕ್ಕಿ ಹೊಡೆದು ಸಾವು

ಕುಣಿಗಲ್: ಇನ್ನೋವಾ ಕಾರೊಂದು ರಸ್ತೆ ಡಿವೈಡರ್ ಗೆ ಢಿಕ್ಕಿ ಹೊಡೆದು ಪಕ್ಕದಲ್ಲಿ ಚಲಿಸುತ್ತಿದ್ದ ಟೆಂಪೋ ಟ್ರಾವಲ್ಸ್ ಗೆ ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಎಂಟು ಮಂದಿ ಗಾಯಗೊಂಡಿರುವ ಘಟನೆ ಕುಣಿಗಲ್ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 75 ಹೇರೂರು ಬೈಪಾಸ್ ನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಇನ್ನೋವಾ ಕಾರು ಚಾಲಕ ಹಾಸನ ಜಿಲ್ಲೆ ಹೊಳೇನರಸೀಪುರ ತಾಲೂಕಿನ ಸುನೀಲ್ (30) ಮೃತಪಟ್ಟ ದುರ್ದೈವಿಯಾಗಿದ್ದು, ಮತ್ತೊಬ್ಬನ ಹೆಸರು ಇನ್ನಷ್ಟೇ ತಿಳಿದು ಬರಬೇಕಿದೆ. ಇನ್ನೋವಾ ಕಾರು ಬೆಂಗಳೂರಿನಿಂದ ಹಾಸನ ಕಡೆ ಹೊರಟ್ಟಿದ್ದು, ಚಾಲಕನ ನಿಯಂತ್ರಣ ತಪ್ಪಿ ನಾಗಮಂಗಲದಿಂದ ಬೆಂಗಳೂರು ಮದುವೆಗೆ ಹೊರಟ್ಟಿದ್ದ ಟೆಂಪೋ ಟ್ರಾವಲ್ಸ್ ಗೆ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಬವಿಸಿದೆ ಎನ್ನಲಾಗಿದೆ. ಗಾಯಾಳುಗಳನ್ನು ಅದಿಚುಂಚನಗಿರಿ ಆಸ್ಪತ್ರೆ ದಾಖಲಿಸಲಾಗಿದೆ. ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ.

Post a Comment

Previous Post Next Post