ಅರಕಲಗೂಡು :- ನಾಡಿನ ಸಮಸ್ತ ಜನತೆಗೆ ಒಳಿತಾಗಲಿ ದೇಶದಲ್ಲಿ ತಲೆದೂರಿರುವ ರೋಗ ರುಜಿನಗಳು ದೂರಾಗಿ ಪ್ರತಿಯೊಬ್ಬ ನಾಗರಿಕರು ನೆಮ್ಮದಿಯಿಂದ ಜೀವಿಸುವಂತಾಗಿದೆ ಎಂದು ಅಮ್ಮನವರಲ್ಲಿ ಪ್ರಾರ್ಥಿಸಿರುವುದಾಗಿ ತಾಲ್ಲೂಕು ಕಾಂಗ್ರೆಸ್ ಮುಖಂಡರು ಹಾಗೂ ಸಮಾಜ ಸೇವಕರಾದ ಎಂಟಿ ಕೃಷ್ಣೇಗೌಡರು ಹೇಳಿದ್ದಾರೆ .
ಪಟ್ಟಣದ ಅದಿದೇವತೆ ಶ್ರೀ ದೊಡ್ಡಮ್ಮತಾಯಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಪಟ್ಟಣದ ದೊಡ್ಡಮ್ಮತಾಯಿ ದೇವಾಲಯದಲ್ಲಿ ದೊಡ್ಡಮ್ಮ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು ಈ ಸಂದರ್ಭದಲ್ಲಿ ದೊಡ್ಡಮ್ಮ ಸೇವಾ ಸಮಿತಿ ವತಿಯಿಂದ ಕೃಷ್ಣೇಗೌಡರನ್ನು ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀ ರಾಮಸ್ವಾಮಿಯವರು ಹಾಗೂ ಪದಾಧಿಕಾರಿಗಳಾದ ಶ್ರೀ ಶಶಿಕುಮಾರ್, ವೀರ ಕನ್ನಡಿಗ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಕೆ ಟಿ ರವೀಂದ್ರ ಕುಮಾರ್ ಹಾಜರಿದ್ದರು.
Tags
ಅರಕಲಗೂಡು