ಕನ್ನಡದ ಓಟಿಟಿ ಬಿಗ್ ಬಾಸ್ ದಿನದಿಂದ ದಿನಕ್ಕೆ ಕಳೆ ಹೆಚ್ಚುತ್ತಿದೆ. ನಿತ್ಯ ಒಂದಲ್ಲ ಒಂದು ವಿಷಯಕ್ಕೆ ದೊಡ್ಮನೆ ಸದ್ದು ಮಾಡುತ್ತಿದೆ. ವಾರಾಂತ್ಯದ ಕಿಚ್ಚನ ಎಂಟ್ರಿಯ ಜೊತೆಗೆ ವೀಕೆಂಡ್‌ನಲ್ಲಿ ಮನೆಯಿಂದ ಯಾರು ಹೊರ ನಡೆಯಲಿದ್ದಾರೆ ಎಂಬ ವಿಷ್ಯವಾಗಿ ಕೂಡ ಫ್ಯಾನ್ಸ್ ಕ್ಯೂರಿಯಸ್ ಆಗಿರುತ್ತಾರೆ.
ಇದೀಗ ಮೂರೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಉದಯ್ ಸೂರ್ಯ ಹೊರ ಬಂದಿದ್ದಾರೆ.
ಪ್ರತಿ ವಾರವೂ ಮನೆಯಿಂದ ಒಬ್ಬಬ್ಬರೆ ಹೊರ ಬರುತ್ತಿದ್ದಾರೆ. ಆರು ವಾರವಿರುವ ಬಿಗ್ ಬಾಸ್ ಓಟಿಟಿ ಸೀಸನ್‌ನಲ್ಲಿ ಈ ವಾರ ಉದಯ್ ಸೂರ್ಯ ಔಟ್ ಆಗಿದ್ದಾರೆ. ಮನೆಯಲ್ಲಿ ಇರುವಂತಹ ರೀತಿ, ವಾರದ ಪರ್ಫಾಮೆನ್ಸ್, ಆಡಿರುವ ಮಾತು ಎಲ್ಲಾ ಗಣನೆಗೆ ತೆಗೆದುಕೊಂಡು ಓರ್ವ ಸ್ಪರ್ಧಿಗೆ ಬಿಗ್ ಬಾಸ್ ಮನೆಯ ಆಟ ಅಂತ್ಯವಾಗುತ್ತದೆ. ಈ ವಾರ ಮನೆಯಿಂದ ಉದಯ್ ಸೂರ್ಯ ಹೊರ ನಡೆದಿದ್ದಾರೆ.
ಇತ್ತೀಚಿನ ಎಪಿಸೋಡ್‌ನಲ್ಲಿ ಉದಯ್ ಸೂರ್ಯ, ಸಾನ್ಯ ಮತ್ತು ಜಶ್ವಂತ್ ಹಾಗೂ ರೂಪೇಶ್ ಸ್ನೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿರುತ್ತಾರೆ. ಬಳಿಕ ಈ ವಿಚಾರವೇ ಮನೆಯ ಚರ್ಚೆಗೆ ಕಾರಣವಾಗಿತ್ತು. ಉದಯ್ ನಡೆಗೆ ಮನೆಯ ಮಂದಿ ಛೀಮಾರಿ ಹಾಕಿದ್ದರು. ಉದಯ್ ಆಡಿರುವ ಮಾತೇ ಅವರಿಗೆ ಮುಳುವಾಗಿದೆ. ಇದೀಗ ಮೂರೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಉದಯ್ ಹೊರ ಬಂದಿದ್ದಾರೆ.
Tags
ಸಿನಿಮಾ