ಹಾಸನ ಜಿಲ್ಲಾ ಭಜಂತ್ರಿ ಸಂಘ ವತಿಯಿಂದ ಪುರಸ್ಕಾರ ಹಾಗೂ ಚಿರಸ್ಮರಣ ಕಾರ್ಯಕ್ರಮ

2021-22ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇಕಡ 75 ಅಂಕಗಳನ್ನು ಪಡೆದು ಉತ್ತೀರ್ಣರಾದ ಸವಿತಾ ಸಮಾಜದ ಮಕ್ಕಳಿಗೆ ಸತತ ಮೂರನೇ ವರ್ಷವೂ ಕೂಡ ಅದ್ದೂರಿಯಾಗಿ ಪ್ರತಿಭಾ ಪುರಸ್ಕಾರ ವನ್ನು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ  ಹಾಸನ ಜಿಲ್ಲಾ ಭಜಂತ್ರಿ ಸಂಘದ ವತಿಯಿಂದ ಸವಿತಾ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕರ್ನಾಟಕ ಡೋಲ್ ಚಕ್ರವರ್ತಿ ದಿವಂಗತ ಡೆಂಕಣಿಕೋಟೆ ಮುನಿರತ್ನಂ ಹಾಗೂ ಸ್ಯಾಕ್ಸೋಫೋನ್  ವಿದ್ವಾನ್ ದಿವಂಗತ  ಕದ್ರಿ ಗೋಪಾಲನಾಥ್ ರವರ ಚಿರಸ್ಮರಣಾ ಕಾರ್ಯಕ್ರಮವು ಯುವ ಮಂಗಳವಾದ್ಯ ಕಲಾವಿದರಿಂದ ಬಹಳ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯಧ್ಯಕ್ಷ ಕಿರಣ್ ಕುಮಾರ್  ಮಾತನಾಡಿ ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಎಲ್ಲಾ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಪುರಸ್ಕಾರ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸವಿತಾ ಸಮಾಜದ ವತಿಯಿಂದ ಆಯೋಜಿಸಲಾಗುವುದು ಎಂದರು ನಂತರ ಮಾತನಾಡಿದ  ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷ ನರೇಶ್ ಕುಮಾರ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಸವಿತಾ ಅಭಿವೃದ್ಧಿ ಮಂಡಳಿ ನೂತನವಾಗಿ ರಚಿಸಲಾಗಿದ್ದು ಇದರಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಅದರಲ್ಲಿ ವಿಶೇಷವಾಗಿ ಸವಿತಾ ಸಮಾಜಕ್ಕೆ ಮೂಲ ಸೌಲಭ್ಯ ಕಲಿಸಿಕೊಡುವುದರಲ್ಲಿ ಈಗಾಗಲೇ ಹಲವಾರು ಯೋಜನೆಗಳನ್ನು ತಂದಿದೆ ನಾವು ಕೂಡ ಸರ್ಕಾರದ ಮಟ್ಟಿಗೆ ವಿವಿಧ ಯೋಜನೆಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತಿದ್ದೇವೆ ಎಂದರು ಈಗಾಗಲೇ ವಿವಿಧ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಸಮಾಜದ ಬಾಂಧವರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಲ್ಲರ ಗಮನ ಸೆಳೆದರು ಹಾಗೂ ಸ್ಥಳೀಯ ಶಾಸಕರು ಕೂಡ ಸವಿತಾ ಸಮಾಜದ ಬೆನ್ನೆಲುಬುಗೆ ನಿಂತಿರುವುದು ಶ್ಲಾಘನೀಯ ಎಂದು ಶಾಸಕ ಪ್ರೀತಂ ಗೌಡರವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ನಿರ್ದೇಶಕರಾದ ನಾಗರಾಜುರವರು ಮೈಸೂರು ಎಚ್ ಡಿ ರಾಮುರವರು ಬೆಂಗಳೂರು ಹಾಸನ ಜಿಲ್ಲಾ ಭಜಂತ್ರಿ ಸಂಘದ ಜಿಲ್ಲಾಧ್ಯಕ್ಷ ದಯಾನಂದ್  ಹಾಸನ ನಗರಸಭಾ ಸದಸ್ಯರಾದ ಸಂತೋಷ್ ಬೇಲೂರು ಸವಿತಾ ಸಮಾಜದ ಅಧ್ಯಕ್ಷ ನರಸಿಂಹಸ್ವಾಮಿ ಹಾಸನ ನಗರ ಸವಿತಾ ಸಮಾಜದ ಅಧ್ಯಕ್ಷ ಮುರುಗೇಶ್  ಮುಖ್ಯೋಪಾಧ್ಯಾಯರಾದ ರಮೇಶ್  ನಗರಸಭಾ ಮಾಜಿ ಸದಸ್ಯರಾದ ರವಿಶಂಕರ್ ಹಾಸನ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆಯ ವ್ಯವಸ್ಥಾಪಕರಾದ ನಾಗೇಂದ್ರ ಸಹಕಾರ ಸಂಘಗಳ ನೊಂದಣಿ ಅಧಿಕಾರಿಗಳಾಗಿ ನಿವೃತ್ತರಾದ ದಯಾನಂದ್ ಬೇಲೂರು ತಾಲೂಕು ಸವಿತಾ ಸಮಾಜ ಮಹಿಳಾ ಸಂಘದ ಅಧ್ಯಕ್ಷ ಸುಮಿತ್ರ ಮೋಹನ್ ಕಾರ್ಯದರ್ಶಿ ಗೀತಾ ಇತರರು  ಹಾಜರಿದ್ದರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಸವಿತಾ ಸಮಾಜದ ಹಲವಾರು ಬಂಧುಗಳಿಗೆ  ಕಾರ್ಯಕ್ರಮಕ್ಕೆ ಕೈಜೋಡಿಸುವ ಮೂಲಕ ಯಶಸ್ವಿ ಮಾಡಿಕೊಟ್ಟ ಪ್ರತಿಯೊಬ್ಬರಿಗೂ ನರಸಿಂಹಸ್ವಾಮಿ ಬೇಲೂರು ರವರು ತುಂಬು ಹೃದಯದ ಧನ್ಯವಾದಗಳು ಅರ್ಪಿಸಿದರು.

Post a Comment

Previous Post Next Post