ರೇವಣ್ಣ ಆರೋಪಕ್ಕೆ ಪ್ರೀತಂ ತಿರುಗೇಟು ಅವರ ಐಡಿಯಾಲಜಿ, ಹಿಟ್ಲರ್ ಸಂಸ್ಕೃತಿ ಹಾಸನಕ್ಕೆ ಒಗ್ಗಲ್ಲ ಎಂದು ಟಾಂಗ್

ಹಾಸನ: ತಮ್ಮ ವಿರುದ್ಧ ಹಲವು ಆರೋಪ ಮಾಡಿದ್ದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಶಾಸಕ ಪ್ರೀತಂ ಜೆ.ಗೌಡ ತಿರುಗೇಟು ನೀಡಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಡಿಸಿ ಆರ್.ಗಿರೀಶ್ ಅವರನ್ನು ಒಳ್ಳೇ ಜಾಗಕ್ಕೆ ಕೂರಿಸಿದ್ದಾರೆ ಎಂಬ ದೂರಿಗೆ,
ನಾನೊಬ್ಬ ಸಾಮಾನ್ಯ ಶಾಸಕ, ನಾನು ಯಾರನ್ನು ಎಲ್ಲಿಗೂ ಕರೆದುಕೊಂಡು ಹೋಗಿ ಕೂರಿಸಲು ಆಗಲ್ಲ ಎಂದು ಟಾಂಗ್ ನೀಡಿದರು. 


ರೇವಣ್ಣ ಹಿರಿಯರಿದ್ದಾರೆ, ಅವರ ಮಾರ್ಗದರ್ಶನ ಮಾಡಿದಂತೆ ಹಲವು ಅಭಿವೃದ್ಧಿ ಕೆಲಸ ಆಗಿವೆ. ಏರ್‌ಪೋರ್ಟ್ ಆಗಬೇಕು ಅಂದಿದ್ದರು. ದೇವೇಗೌಡರ ಮನವಿಗೆ ಸ್ಪಂದಿಸಿದ ಅಂದಿನ ಸಿಎಂ ಯಡಿಯೂರಪ್ಪ ಯೋಜನೆಗೆ ಅನುದಾನ ನೀಡಿದರು. ನಾಲ್ಕೆöÊದು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆ ಈಗ ಆಗುತ್ತಿದೆ. ಮೂಲ ಯೋಜನೆಯಂತೆ ಕಾಮಗಾರಿ ಮಾಡಲು ಈಗಿರುವ ಜಾಗದಲ್ಲೇ ಸಾಧ್ಯವಿದೆ ಎಂದು ತಿರುಗೇಟು ನೀಡಿದರು.
ಮುಂದಿನ ದಿನಗಳಲ್ಲಿ ಏರ್‌ಬಸ್ ಬರಲು ಬೇಕಾಗುವಷ್ಟು ಜಮೀನು ಈಗಲೂ ಮೀಸಲಿದೆ. ಕಡಿಮೆ ಜಾಗದಲ್ಲಿ ಅತಿ ಉತ್ತಮ ವಿಮಾನ ನಿಲ್ದಾಣ ಮಾಡಲು ಯೋಜನೆ ರೆಡಿಯಾಗಿದೆ. ಇನ್ನೂ ಅವರು ಸಲಹೆ ಕೊಟ್ಟರೆ ಅದನ್ನೂ ಪರಿಗಣಿಸುತ್ತೇವೆ ಎಂದರು.
ಖರಾಬು ಭೂಮಿ ಹೊಡೆಯಲು ಹಳೇ ಪ್ಲಾನ್ ಬದಲಾವಣೆ ಮಾಡಲಾಗಿದೆ ಎಂಬ ಆರೋಪಕ್ಕೂ, ಖರಾಬು ಭೂಮಿ ಹಾಗೆಯೇ ಉಳಿಯಲಿದೆ. ರೈತರ ಜಮೀನು ರೈತರಿಗೆ ಹೋಗಲಿದೆ. ಫಲವತ್ತಾದ, ಬೆಲೆ ಬಾಳೋ ಭೂಮಿ ಗಾಲ್ಫ್ ಕ್ಲಬ್‌ಗೆ ಹೋಗಬೇಕಾ ಅನ್ನೋದನ್ನ ಯೋಚನೆ ಮಾಡಬೇಕು.
ಯಾರೊ ಹತ್ತು ಜನ ಬಂದು ಗಾಲ್ಫ್ ಆಡಲು ನಮ್ಮ ರೈತರ 250 ಎಕರೆ ಕೊಡಬೇಕಾ ಎಂದು ಪ್ರಶ್ನಿಸಿದರು. 
ರೈತರಿಗೆ ಬಿಟ್ಟ ವಿಚಾರ:
ಭೂ ಹೊಡೆಯಲು ಮುಂದಾಗಿದ್ದಾರೆ ಎಂಬ ಆರೋಪಕ್ಕೆ, ರೈತರು ತಮ್ಮ ಭೂಮಿ ಉಳಬೇಕೊ, ಲೇಔಟ್ ಮಾಡಬೇಕೋ, ಮನೆ ಕಟ್ಟಬೇಕೊ ಅದು ಅವರಿಗೆ ಬಿಟ್ಟದ್ದು. ಅದಕ್ಕೆ ಪ್ರೀತಂಗೌಡ ಅಥವಾ ಇನ್ನೊಬ್ಬರು ಮಾತನಾಡೋ ಅವಶ್ಯಕತೆ ಇಲ್ಲ. ಆದರೆ ರೈತರ ಭೂಮಿಯಲ್ಲಿ ಗಾಲ್ಫ್ ಮಾಡೋಕೆ ನನ್ನ ಆಕ್ಷೇಪಣೆ ಇದೆ. ರೈತರು ತಮ್ಮ ಭೂಮಿಯಲ್ಲಿ ಬಡಾವಣೆ ಮಾಡ್ತೀನಿ ಅಂದ್ರೆ ಕೇಳೋಕೆ ಅರ‍್ಯಾರು, ನಾನ್ಯಾರು ಎಂದು ಕೇಳಿದರು. 
ನಿಮ್ಮೂರ ಜಮೀನನ್ನು ನಾನು ಗಾಲ್ಫ್ ಕ್ಲಬ್ ಮಾಡಬೇಕು ಎಂದಿದ್ದೀನಿ ಅಂತ ಧೈರ್ಯ ಇದ್ದರೆ ಊರಿನ ಜನರ ಮುಂದೆ ಹೇಳಲಿ ಎಂದು ಸವಾಲು ಹಾಕಿದರು. ಸುಮ್ಮನೇ ಐಬಿಯಲ್ಲಿ ಕೂತು ಪ್ರೆಸ್ ಮೀಟ್ ಮಾಡೋದಲ್ಲ. ಧೈರ್ಯ ಇದ್ದರೆ ಆ ಊರಿಗೆ ಹೋಗಿ ಹೇಳಲಿ. ರೈತರ ಪ್ರಶ್ನೆಗೆ ಅವರು ಉತ್ತರ ಕೊಡಲಿ ಎಂದರು. ಬೇಕಿದ್ದರೆ ಅವರ ಜಮೀನಿನಲ್ಲಿ ಗಾಲ್ಫ್ ಕ್ಲಬ್ ಮಾಡಲಿ ಎಂದು ಕುಟುಕಿದ ಪ್ರೀತಂ, ರೇವಣ್ಣ ಏನು ಹುಡುಗಾಟ ಆಡುತ್ತಿದ್ದಾರಾ ಎಂದು ಆಕ್ರೋಶ ಹೊರ ಹಾಕಿದರು.
 
ಅಧಿಕಾರ ಇದ್ದಾಗ ಏನು ಮಾಡಿದ್ರು:
ನಾವು ಕಾರ್ಗೊ ವಿಮಾನ ಬರೋ ಹಾಗೆ ಮಾಡೋಕೆ ಮಾಡಿದ್ಚಿ,ಇವರು ಅದ್ಯಾವುದೊ ಜಟಕಾ ವಿಮಾನ ತರ್ತಾರಂತೆ ಎಂದಿದ್ದ ರೇವಣ್ಣ ವಿರುದ್ಧ ಗರಂ ಆದ ಪ್ರೀತಂ, ಇವರು ಪ್ರಧಾನಿ ಆಗಿದ್ರು, ಸಿಎಂ ಆಗಿದ್ರು, ಲೋಕೋಪಯೋಗಿ ಸಚಿವರಾಗಿದ್ರು ಆಗ ಏಕೆ ಮಾಡಲಿಲ್ಲ. ಜನತೆ ಅವಕಾಶ ಕೊಟ್ಟಾಗ ಏನು ಮಾಡುತ್ತಿದ್ರಿ. ರಿಂಗ್‌ರೋಡ್, ವಿಮಾನ ನಿಲ್ದಾಣ ಮಾಡೋಕೆ ಮಾಡೊಕೆ ಯಡಿಯೂರಪ್ಪ ಸಾಹೇಬರು, ಪ್ರೀತಂಗೌಡ ಬರಬೇಕಾಯ್ತು. ಯಾವಾಗ್ಲೂ ನಾನು ಬಸ್ ಸ್ಟಾ÷್ಯಂಡ್ ಮಾಡಿದೆ, ಆಸ್ಪತ್ರೆ ಮಾಡಿದೆ ಅಂತಾರೆ. ಯಾರೇ ಆಗಿದ್ರೂ ಇದನ್ನು ಮಾಡುತ್ತಿದ್ದರು ಎಂದರು.
40 ವರ್ಷದಿಂದ ರಿಂಗ್‌ರೋಡ್, ವಿಮಾನ ನಿಲ್ದಾಣ ಏಕೆ ಆಗಿರಲಿಲ್ಲ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಜೆಡಿಎಸ್ ಸಭೆಯಲ್ಲಿ ಗದ್ದಲಕ್ಕೆ ಕೆಲವರ ಶಡ್ಯಂತ್ರ ಇದೆ ಎಂದು ರೇವಣ್ಣ ದೂರಿದ್ದಾರೆ. ಅವರ ಪಕ್ಷದ ಸಭೆಯಲ್ಲೇ ಒಮ್ಮೆ ರೌಡಿ ಶೀಟರ್ ಅಂದ್ರು, ಒಮ್ಮೆ ಕುಡುಕರು ಅಂದ್ರು. ನಾನು ಬೇರೆ ಪಕ್ಷದ ಕಾರ್ಯಕರ್ತರ ಬಗ್ಗೆ ಮಾತಾಡಲ್ಲ. ಅವರ ಹೇಳಿಕೆ ಬಗ್ಗೆ ಅವರೇ ಉತ್ತರ ಕೊಡಲಿ. ಸಭೆಗೆ ಪೊಲೀಸ್ ರಕ್ಷಣೆ ಬೇಕಿತ್ತು ಅಂದಿದ್ದಾರೆ. ಇಂತಹ ಪರಿಸ್ಥಿತಿಗೆ ರೇವಣ್ಣ ಬಂದಿದ್ದಾರೆ ಅಂದರೆ ಅವರು ರಾಜಕೀಯವಾಗಿ ಎಂತಹ ಸ್ಥಿತಿಗೆ ಬಂದಿದ್ದಾರೆ ಊಹೆ ಮಾಡಿ. ಕಾರ್ಯಕರ್ತರನ್ನ ಕುಡುಕರು, ರೌಟಿಶೀಟರ್, ಎದ್ದು ಹೋಗಿ ಎನ್ನೋದು ಅವರ ಐಡಿಯಾಲಜಿ. ಈ ಐಡಿಯಾಲಜಿ, ದಬ್ಬಾಳಿಕೆ, ಹಿಟ್ಲರ್ ಸಂಸ್ಕöÈತಿ ಹಾಸನ ಜನ ಒಪ್ಪಲ್ಲ. 
-ಪ್ರೀತಂ ಜೆ.ಗೌಡ, ಶಾಸಕ

Post a Comment

Previous Post Next Post