ಜನತಾ ತೀರ್ಪಿಗೆ ತಲೆಬಾಗುವೆ ಜೊತೆಯಲ್ಲಿದ್ದುಕೊಂಡೆ ಬೆನ್ನಿಗೆ ಚೂರಿ: ಬನವಾಸೆ ರಂಗಸ್ವಾಮಿ

ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಜನತಾ ತೀರ್ಪಿಗೆ ನಾನು ತಲೆಬಾಗುತ್ತೇನೆ. ಎಲ್ಲೊ ಒಂದುಕಡೆ ಜೊತೆಯಲ್ಲಿದ್ದುಕೊಂಡೆ ಬೆನ್ನಿಗೆ ಚೂರಿ ಹಾಕಿರುವ ಅನುಮಾನವಿದೆ ಎಂದು ಕಾಂಗ್ರೆಸ್ ಹಾಸನ ಕ್ಷೇತ್ರದ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಬೇಸರವ್ಯಕ್ತಪಡಿಸಿದರು.
 ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಮೊದಲೆ ಹೇಳಿದಂತೆ ಜನತಾ ತೀರ್ಪಿಗೆ ನಾನು ತಲೆ ಬಾಗುತ್ತೇನೆ. ಮತದಾರರು ಮುಂದೆ ಪಶ್ಚತಾಪ ಪಡುತ್ತಾರೆ ಎಂಬುದು ನನ್ನ ಭಾವನೆ. ಕಳೆದ ಮೂರು ವರ್ಷದ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಪಕ್ಷಕ್ಕೆ ದಕ್ಕೆ ಆದಾಗ ಹೋರಾಟವನ್ನು ಮಾಡಿದ ಬಗ್ಗೆ ಎಲ್ಲಾರು ಗಮನಿಸಿದ್ದಾರೆ. ಕೊರೋನಾ ವೇಳೆ ಪುಡ್ ಕಿಟ್, ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಅಲ್ಲಿಗೆ ನೀರಿನ ಟ್ಯಾಂಕರ್ ನ್ನು ನೀಡಿದ್ದೇನೆ. ಬಡವರಿಗೆ ಸ್ಪಂದಿಸಿದ್ದೇನೆ. ದೇವಾಲಯಗಳ ಜೀಣೋದ್ಧಾರಕ್ಕೆ ನನ್ನ ಕೈಲಾದ ಸಹಾಯ, ಟೈಲ್ಸ್ ಗೆ ಸಹಾಯ, ಕ್ರಿಶ್ಚನ್ ಸ್ಮಶಾನಗಳಿಗೆ ಸ್ವಚ್ಛತೆ ಸೇರಿದಂತೆ ಎಲ್ಲಾ ವರ್ಗದವರಿಗೂ ಹಲವಾರು ಸೇವಾ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದೇನೆ ಎಂದರು. ಈ ಚುನಾವಣೆಯಲ್ಲಿ ಯಾರ ಬಳಿಯೂ ಕೈ ಚಾಚದೇ ಪ್ರಮಾಣಿಕವಾಗಿ ಎದುರಿಸಿದ್ದೇನೆ. ನನಗೆ ಅರಿವಿಲ್ಲದೇ ನಮ್ಮಲ್ಲೆ ಅನೇಕರು ಜೆಡಿಎಸ್ ಪಕ್ಷಕ್ಕೆ ಮತ ಹಾಕುವಂತೆ ಓಲೈಸುವ ಕೆಲಸ ಮಾಡಿದರೇನೋ.. ಜೊತೆಯಲ್ಲಿ ಇದ್ದುಕೊಂಡೆ ನನ್ನ ಬೆನ್ನಿಗೆ ಚೂರಿ ಹಾಕಿದರೇನೋ ಎನ್ನುವ ಅನುಮಾನ ನನ್ನಲ್ಲಿದೆ ಎಂದು ಬೇಸರವ್ಯಕ್ತಪಡಿಸಿದರು. ಬಿಜೆಪಿಯನ್ನು ಸೋಲಿಸಬೇಕೆಂದು ನನ್ನ ಮನೆಯನ್ನೇ ನಾಶ ಮಾಡುವಂತದ್ದು ಎಷ್ಟು ಸರಿ ಎಂದು ದುಃಖವ್ಯಕ್ತಪಡಿಸಿ, ಪ್ರಾಮಾಣಿಕ ರಾಜಕಾರಣಕ್ಕೆ ಇದೇನಾ ಬೆಲೆ ಅನಿಸುತ್ತಿದೆ. ಇನ್ನು ಯಾವ ರೀತಿ ರಾಜಕಾರಣ ಮಾಡಬೇಕೆಂದು ನನಗೆ ಆಘಾತವಾಗಿದೆ. ಹೈಕಮಾಂಡೆ ಏನು ಹೇಳುತ್ತಾರೆ ಆ ನಿರ್ಧಾರಕ್ಕೆ ನಾನು ಬದ್ಧವಾಗಿ ಕೆಲಸ ಮಾಡುತ್ತೇನೆ. ಇಡೀ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಯಾರು ತಿರಸ್ಕಾರ ಮಾಡಿದ್ದಾರೆ ಅದಕ್ಕೆ ಧ್ವೇಷದ ರಾಜಕಾರಣ ಮಾಡದೇ ನಮ್ಮ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಬಂದಿದ್ದು, ನಿಮ್ಮ ಶ್ರೇಯಕ್ಕಾಗಿ ಮುಂದಾಗುತ್ತೇನೆ ಎಂದು ಹೇಳಿದರು. ಮುಂದೆ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ತಂದೆ ತರುತ್ತೇನೆ. ಕಾಣದ ಕೈಗಳು ಯಾರು ಕೆಲಸ ಮಾಡಿದ್ದಾರೆ ಅವರಿಗೆ ದೇವರು ಒಳ್ಳೆಯ ಬುದ್ದಿಕೊಡಲಿ ಎಂದು ಹೆಸರು ಹೇಳದೇ ನೋವಲ್ಲಿ ಹೇಳಿಕೊಂಡರು. ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಗೊಂದಲದಲ್ಲಿ ಸ್ವರೂಪ್ ಗೆ ಟಿಕೆಟ್ ತಪ್ಪಿದ್ರೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಡುವುದಾಗಿ ಕಾಂಗ್ರೆಸ್ ಪಕ್ಷಕ್ಕೆ ದಕ್ಕೆ ಉಂಟಾಯಿತು. ಕೆಟ್ಟವರ ಮತ್ತು ಒಳ್ಳೆಯವರ ಎಲ್ಲಾರನ್ನು ಮನೆಗೆ ಬಿಟ್ಟುಕೊಂಡು ತಪ್ಪು ಮಾಡಿದೆ ಆದರೇ ಯಾವುದಕ್ಕೂ ದೃತಿಗೆಡದೇ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುವೇ. ಮುಂದಿನ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸುವುದಾಗಿ ತಿಳಿಸಿದರು. 
 ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬಸವರಾಜು, ವೆಂಕಟೇಗೌಡ, ಬೂದೇಶ್, ವಿನೋದ್, ಜಗನ್ನಾಥ್ ಇತರರು ಉಪಸ್ಥಿತರಿದ್ದರು.

Post a Comment

Previous Post Next Post