ಹಾಸನ ಜಿಲ್ಲಾಸ್ಪತ್ರೆಯೂ ಆದ ಹಾಸನ ವೈದ್ಯಕೀಯ ಕಾಲೇಜು(HIMS )ಆಸ್ಪತ್ರೆಯ ನವಜಾತ ಶಿಶುಗಳ ಐಸಿಯು ವಾರ್ಡ್‌ನಲ್ಲಿ ಭಾನುವಾರ ಮಧ್ಯಾಹ್ನ ಹವಾನಿಯಂತ್ರಿತ ಸಿಲಿಂಡರ್ ನ ಸ್ಟೆಬಿಲೈಸರ್ ಸ್ಫೋಟಗೊಂಡಿದ್ದು ಸಿಬಂದಿಯ ಸಮಯ ಪ್ರಜ್ಞೆಯಿಂದ ಜಾಗರೂಕತೆಯಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.
ಸ್ಫೋಟದಿಂದ ವಾರ್ಡ್ ನಲ್ಲಿ ಹೊಗೆ ತುಂಬಿಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಬಂದಿಗಳು ತತ್ ಕ್ಷಣವೇ ವಾರ್ಡ್ ನ ಕಿಟಕಿ ಬಾಗಿಲಿನ ಗಾಜುಗಳನ್ನು ಒಡೆದು ಐಸಿಯುನಲ್ಲಿದ್ದ 24 ನವಜಾತ ಶಿಶುಗಳು ಬೇರೆಡೆಗೆ ಶಿಫ್ಟ್ ಮಾಡಿ ರಕ್ಷಿಸುವ ಜಾಣ್ಮೆ ಮೆರೆದಿದ್ದಾರೆ.
ಸಿಬಂದಿಯ ಸಮಯ ಪ್ರಜ್ಞೆಯಿಂದ ವಾರ್ಡನಲ್ಲಿದ್ದ ಬಾಣಂತಿಯರು, ಶಿಶುಗಳ ಪೋಷಕರು ನಿಟ್ಟುಸಿರು ಬಿಟ್ಟರು. ಎಲ್ಲ 24 ನವಜಾತ ಶಿಶುಗಳು ಸುರಕ್ಷಿತವಾಗಿವೆ.
ಸ್ಥಳಕ್ಕೆ ಹಿಮ್ಸ್‌ನ ನಿರ್ದೇಶಕ ಡಾ.ರವಿಕುಮಾರ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣಮೂರ್ತಿ ಭೇಟಿ ನೀಡಿ ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಅಧಿಕಾರಿಗಳ ಮನವಿ ಮಾಡಿದರು.