ಹಾಸನ (ಕರ್ನಾಟಕ ವಾರ್ತೆ):- ಸರ್ಕಾರದಿಂದ ವಿದ್ಯುತ್ ಮಗ್ಗ ಮತ್ತು ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ತೊಡಗಿರುವ ನೇಕಾರರು ಹಾಗೂ ವಿದ್ಯುತ್ ಮಗ್ಗಗಳ ಗಣತಿM/s Academy of management Studies, New Delhi ರವರ ಮುಖಾಂತರ ಕೈಗೊಳ್ಳಲಾಗಿದ್ದು ಸಮೀಕ್ಷೆ ಕಾರ್ಯ ಹಾಸನ ಜಿಲ್ಲೆಯಲ್ಲಿ ಈಗಾಗಲೇ ಮುಕ್ತಾಯದ ಹಂತದಲ್ಲಿ ಇರುತ್ತದೆ. ಸಮೀಕ್ಷೆಯಿಂದ ಬಿಟ್ಟುಹೋಗಿರುವ ನೇಕಾರರು ಇದ್ದಲ್ಲಿ ತ್ವರಿತವಾಗಿ ತಮ್ಮ ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ರೇಷನ್ ಕಾರ್ಡ್, ಲೈಸನ್ಸ್ ಪ್ರತಿ ಹಾಗೂ ಉದ್ಯೋಗ್ ಆಧಾರ್ ಪ್ರತಿಗಳೊಂದಿಗೆ ಈ ಕೂಡಲೇ ಗಣತಿದಾರರಾದ ಸಂತೋಷ್ ಮೊಬೈಲ್ ಸಂಖ್ಯೆ:7899471058 ಇವರನ್ನು ಸಂಪರ್ಕಿಸಲು ಹಾಗೂ ಸಹಾಯಕ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂಧ್ರ ಕಟ್ಟಡ, ಡೈರಿ ಸರ್ಕಲ್, ಹಾಸನ (ದೂರವಾಣಿ ಸಂಖ್ಯೆ:08172-240627) ಗೆ ಸಂಪರ್ಕಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Tags
ಹಾಸನ
