ಬೆಂಡೆಕೆರೆ ಗ್ರಾಮ ಪಂಚಾಯಿತಿಗೆ ಎರಡನೆ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯನ್ನು ತೋಟಗಾರಿಕೆ ಅಧಿಕಾರಿಯಾದ ಶ್ರೀಯುತ ಸತೀಶ್ ರವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು ಚುನಾವಣಾ ಪ್ರಕ್ರಿಯೆಯಲ್ಲಿ ಏಕ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಶ್ರೀಮತಿ ಚಂದ್ರಮ್ಮ ಬೆಂಡೆಕೆರೆ ಅಜ್ಜಪ್ಪ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಯುತ ಚಂದ್ರೇಗೌಡರನ್ನು ಅವಿಧ ಆಯ್ಕೆ ಎಂದು ಘೋಷಿಸಿದರು ನೂತನವಾಗಿ ಆಯ್ಕೆಯಾದ ಶ್ರೀಮತಿ ಚಂದ್ರಮ್ಮನವರು ಸಭೆಯನ್ನು ಉದ್ದೇಶಿಸಿ ಬೆಂಡೆ ಕೆರೆ ಗ್ರಾಮ ಪಂಚಾಯತಿಯನ್ನು ಮಾದರಿ ಪಂಚಾಯತಿಯಾಗಿ ಸರ್ವ ಜನಾಂಗದವರಿಗೂ ಸರ್ಕಾರಿ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶ್ರೀಯುತ ಬಿಳಿ ಚೌಡಯ್ಯ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಬಂಡಿಗೌಡ್ರು ರಾಜಣ್ಣ, ಅರಸಿಕೆರೆ ತಾಲೂಕ್ ಯಾದವ ಸಂಘದ ಅಧ್ಯಕ್ಷರಾದ ಬೆಂಡೆಕೆರೆ ಅಜ್ಜಪ್ಪ, ಪಿಡಬ್ಲ್ಯೂಡಿ ಗುತ್ತಿಗೆದಾರರಾದ ಪ್ರಭುದೇವ್, ಮಾಜಿ ಯೋಜನಾ ಪ್ರಾಧಿಕಾರದ ಸದಸ್ಯರಾದ ಶ್ರೀಯುತ ಸುಬ್ರಮಣ್ಯ ಬಾಬು ಹಾಗೂ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರುಗಳಾದ ಶ್ರೀಯುತ ತಿಮ್ಮಪ್ಪ, ಚಂದ್ರಪ್ಪ ನಟರಾಜ್, ಗ್ರಾಮ ಪಂಚಾಯತಿಯ ಪಿಡಿಒ ಶ್ರೀಮತಿ ಆಶಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭಕೋರಿದರು
Tags
ಅರಸೀಕೆರೆ