ಹಾಸನ ಜಿಲ್ಲೆ (Hasana News) ಅರಸೀಕೆರೆ ತಾಲೂಕಿನ ಬೇಳಗುಂಬ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 206ರಲ್ಲಿ (National highway 206) ಡಿವೈಡರ್ ದಾಟುವ ವೇಳೆ ಹುಣಸೆಘಟ್ಟ ಗ್ರಾಮದ ರವಿ (45) ಬೈಕ್‌ನಲ್ಲಿ ಬಂದು (Bike rider) ಪಕ್ಕದ ಅಂಗಡಿಗೆ ಹೋಗಲೆಂದು ರಸ್ತೆ ಡಿವೈಡರ್ ದಾಟುವ ವೇಳೆ (Crossing the divider) ಕಬ್ಬಿಣದ ಡಿವೈಡರ್‌ನಲ್ಲಿ ವಿದ್ಯುತ್ ಪ್ರವಹಿಸಿ ಅದರ ಶಾಕ್‌ನಿಂದ (Electric Shock) ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ರವಿ ಅವರು ರೋಡ್
ಡಿವೈಡರ್‌ನ್ನು ಕೈಯಿಂದ ಹಿಡಿದು ಇನ್ನೇನು ಮತ್ತೊಂದು ಭಾಗಕ್ಕೆ ಹತ್ತಿಳಿಯಬೇಕು ಎನ್ನುವಷ್ಟರಲ್ಲಿ
ಅವರು ವಿದ್ಯುತ್ ಶಾಕ್‌ಗೆ ಒಳಗಾಗಿ ಸ್ಥಳದಲ್ಲೇ ಬಿದ್ದು ಮೃತಪಟ್ಟರು. ಕಬ್ಬಿಣದ ಡಿವೈಡರ್‌ಗೆ ಎಲ್ಲಿಂದ
ವಿದ್ಯುತ್ ಪ್ರವಹಿಸಿದೆ ಎನ್ನುವುದು ತಿಳಿದುಬಂದಿಲ್ಲ. ಡಿವೈಡರ್ ಮಧ್ಯಭಾಗದಲ್ಲಿ ಹಾಕಿರುವ ವಿದ್ಯುತ್
ಕಂಬಗಳಿಂದ ಮಿಸ್ ಕನೆಕ್ಷನ್ ಆಗಿ ವಿದ್ಯುತ್ ಪ್ರವಹಿಸಿರಬಹುದು ಎಂದು ಅಂದಾಜಿಸಲಾಗಿದೆ.
ಈ ರೀತಿ ನಿರ್ಲಕ್ಷ್ಯ
ವಹಿಸಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರವಿ ಅವರ ಮೃತದೇಹವನ್ನು
ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಯಿತು.
ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಲ್ಲೇ ಪ್ರಕರಣ ದಾಖಲಾಗಿದೆ.