ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಆಗಸ್ಟ್ 12 ಕ್ಕೆ ಸಾಹಿತ್ಯ ಪಯಣ ಹೆಜ್ಜೆ

ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದ ವತಿಯಿಂದ ಹಾಸನದ ಗೌರಿಕೊಪ್ಪಲಿನ ಮುಖ್ಯ ರಸ್ತೆಯಲ್ಲಿರುವ ವಿಸ್ತಾರ ಅಕಾಡೆಮಿಯಲ್ಲಿ ಆಗಸ್ಟ್ 12 ಶನಿವಾರ ಇಳಿಹೊತ್ತು 3:30 ಕ್ಕೆ ಹಾಸನ ತಾಲ್ಲೂಕು ಅಧ್ಯಕ್ಷರಾದ ಕೆ.ಸಿ.ಗೀತಾರವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಪಯಣ ಹೆಜ್ಜೆ ಮಾಸಿಕ ಕಾರ್ಯಕ್ರಮವನ್ನು ಬಿ.ವಿ. ವೇದಶ್ರೀ ನಿಶಿತ್‌ರವರ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಕಾರ್ಯದರ್ಶಿ ನೀಲಾವತಿ ಸಿ.ಎನ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಕಾರ್ಯಕ್ರಮದಲ್ಲಿ ಕವಿ ನಾಗರಾಜ್ ದೊಡ್ಡಮನಿಯವರ “ಅವಸಾನಕ್ಕಲ್ಲ ಕವನ ಸಂಕಲನವನ್ನು ಸಾಹಿತಿ ಎಚ್.ಎಸ್.ಬಸವರಾಜ್ ವಿಮರ್ಶೆ ಮಾಡಲಿದ್ದಾರೆ. ನಂತರ ಆಗಮಿತ ಕವಿಗಳಿಂದ ಕವಿಗೋಷ್ಠಿ ಹಾಗೂ ವಿಮರ್ಶೆ ನಡೆಯಲಿದೆ. ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವೀಗೊಳಿಸಬೇಕಾಗಿ ಕಾರ್ಯಕ್ರಮ  ಸಂಚಾಲಕರಾದ ಬಿ.ಟಿ. ಚನ್ನಬಸವೇಶ್ವರ್‌ರವರು ಕೋರಿದ್ದಾರೆ.



Post a Comment

Previous Post Next Post