ಹಾಸನ : ಪ್ರಪಂಚದಲ್ಲಿ ಪ್ರತಿ 40 ಸೆಕೆಂಡಿಗೆ ಒಬ್ಬರಂತೆ ಪ್ರತಿ ಗಂಟೆಗೆ 8ಲಕ್ಷ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಭಾರತದಲ್ಲಿ ಮೂರನೇ ಒಂದು ಭಾಗ ಜನರು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ||ನಾಗೇಶ್ ಪಿ.ಆರಾದ್ಯ ತಿಳಿಸಿದ್ದಾರೆ.
![]() |
| ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಣನೂರು |
ಆತ್ಮಹತ್ಯೆಯ ಬಗ್ಗೆ ನಿರೂಪಣೆಯನ್ನು ಬದಲಾಯಿಸೋಣ Changing The Narrative On Suicide ಎಂಬುದಾಗಿದೆ. ಆತ್ಮಹತ್ಯೆಯ ಆಲೋಚನೆಯ ಬಗ್ಗೆ ತಿಳಿಸುತ್ತಾ ಆತ್ಮಹತ್ಯೆ ಎಂದರೆ ಏನು, ಇದಕ್ಕೆ ಕಾರಣಗಳೇನು, ಓಅಖಃ ಪ್ರಕಾರ 2018ರಲ್ಲಿ 12.4% ರಷ್ಟಿದ್ದ ಪ್ರಕರಣಗಳು 2022ರಲ್ಲಿ 22%ಗೆ ಏರಿಕೆಯಾಗಿದೆ ಎಂದು ತಿಳಿಸಿದರು.
ಇದನ್ನು ಓದಿ : ಗಣೇಶ ವಿಸರ್ಜನೆಯ ಸುರಕ್ಷತೆ: ಹಾಸನದ 'ರೂಟ್-ಮಾರ್ಚ್' ಕ್ರಮ
ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಸುನೀಲ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರತಿಯೊಬ್ಬ ಮಾನವನ ಜೀವನಕ್ಕೆ ಅವನ ಮಾನಸಿಕ ಸ್ಥಿತಿ ಬಹಳ ಮುಖ್ಯ ಹಾಗೂ ಸರಳವಾಗಿರುವ ಜೀವನವನ್ನು ತುಂಬ ಕಠಿಣವಾಗಿಸಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಅರಕಲಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ಪುಷ್ಪಲತಾ ಅವರು ಮಾತನಾಡಿ ಆತ್ಮ್ಮಹತ್ಯೆ ಜೀವನದಲ್ಲಿ ಯಾವುದಾದರು ವ್ಯತ್ಯಾಸಗಳು ಕಂಡು ಬಂದಲ್ಲಿ ಎದೆಗುಂದದೇ ಮೆಟ್ಟಿನಿಲ್ಲಬೇಕು, ಎಲ್ಲದ್ದಕ್ಕು ಸಾವೇ ಪರಿಹಾರವಲ್ಲ ಎಂದು ತಿಳಿಸಿದರು.
ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸೈಕಿಯಾಟ್ರಿಕ್ ಸೋಷಿಯಲ್ ವರ್ಕರ್ ರವೀಂದ್ರ, ಕೆ.ಪಿ ಅವರು ಮಾತನಾಡಿ ಆತ್ಮಹತ್ಯೆಯ ದಿನಾಚರಣೆಯನ್ನು ಆಚರಿಸುವ ಉದ್ದೇಶ ಏನು ಎಂಬುದರ ಬಗ್ಗೆ ತಿಳಿಸುತ್ತಾ, ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಮೂಲಕ ಆತ್ಮಹತ್ಯೆಯನ್ನು ತಡೆಗಟ್ಟೋಣ ಎಂದು ಈ ವರ್ಷದ ಘೋಷಣೆಯನ್ನು ವಿವರಿಸಿದರು.
ಮನೋವೈದ್ಯರಾದ ಡಾ|| ಸೌಂಧರ್ಯ ಅವರು ಮಾತನಾಡಿ ಆತ್ಮಹತ್ಯೆಗೆ ಮುಖ್ಯ ಕಾರಣ ಖಿನ್ನತೆ ಇದಕ್ಕೆ ಒಳಪಟ್ಟವರು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಲಕ್ಷ್ಮೀಶ್ ನೆರವೇರಿಸಿದರು, ಕಾರ್ಯಕ್ರಮದಲ್ಲಿ , ಆರೋಗ್ಯ ಶಿಕ್ಷಣಾಧಿಕಾರಿ ಪರಮೇಶ್, ಆರೋಗ್ಯ ನಿರೀಕ್ಷಣಾಧಿಕಾರಿ ಆನಂದ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ತಂಡದ ಸುಮಲತಾ.ಎ.ಡಿ, ಭಾಗ್ಯ ಸಿ.ಎಸ್, ರಮೇಶ್ ಇವರುಗಳು ಉಪಸ್ಥಿತರಿದ್ದರು.

