ವಕೀಲನ ಮೇಲೆ ಮಾರಣಾಂತಿಕ ಹಲ್ಲೆ

 ಆಲೂರು : ವಕೀಲನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆಲೂರು ತಾಲ್ಲೂಕಿನ, ಈಶ್ವರಹಳ್ಳಿ ಕೂಡಿಗೆ ಬಳಿ ನಡೆದಿದೆ. ರಂಗೇನಹಳ್ಳಿ ಗ್ರಾಮದ ದುಷ್ಯಂತ್ (40) ಹಲ್ಲೆಗೊಳಗಾದ ವಕೀಲ, ವಕೀಲನ ಸ್ಥಿತಿ ಗಂಭೀರವಾಗಿದೆ.

ವಕೀಲ ವೃತ್ತಿ ಜೊತೆಗೆ ಫೈನಾನ್ಸ್ ನೀಡುತ್ತಿದ್ದ ದುಷ್ಯಂತ್, ನಿನ್ನೆ ರಾತ್ರಿ KA-46-L-4087 ನಂಬರ್‌ನ ಬೈಕ್ ನಲ್ಲಿ ರಂಗೇನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಬಂದಂತೆ ಥಳಿಸಿ ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ದುಷ್ಯಂತ್‌ಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ.

ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

Post a Comment

Previous Post Next Post