ಹಾಸನ: ನಗರದ ಸಂತಸ ಐವಿಎಫ್ ಸಂಸ್ಥೆ ವತಿಯಿಂದ ತಮ್ಮ 16ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಲ್ಲದ ದಂಪತಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ಉದ್ಘಾಟಿಸಿ ಮಾತನಾಡಿ, ಸಂತಸ ಐವಿಎಫ್ ಸಂಸ್ಥೆ ಮಕ್ಕಳಿಲ್ಲದ ದಂಪತಿಗಳಿಗೆ ವರದಾನವಾಗಿದೆ. ವೈವಾಹಿಕ ಜೀವನದ ನಂತರ ಪ್ರಮುಖಘಟ್ಟವಾಗಿರುವ ತಂದೆ ತಾಯಿಯಾಗುವ ಕನಸು ಪ್ರತಿಯೊಬ್ಬರ ಜೀವನದಲ್ಲಿ ಸಹಜ ಆದರೆ ಕೆಲವರ ಬದುಕಿನಲ್ಲಿ ವಿವಿಧ ಕಾರಣಗಳಿಂದ ಅದು ಸಾಧ್ಯವಾಗಿರುವುದಿಲ್ಲ ಅಂತವರಿಗೆ ಸಂತಸ ಅವರ ಬಾಳಲ್ಲಿ ಸಂತೋಷ ತರಲಿದೆ ಎಂದರು.
ಕಡಿಮೆ ವೆಚ್ಚದಲ್ಲಿ ಐವಿಎಫ್ ಚಿಕಿತ್ಸೆ ನೀಡುವ ಮೂಲಕ ನೂರಾರು ದಂಪತಿಗಳ ಬಾಳಿಗೆ ಬೆಳಕಾಗಿರುವ ಸಂತಸ ಐವಿಎಫ್ ಸಂಸ್ಥೆ ನಡೆ ಶ್ಲಾಘನೀಯ ಅವರ ಇನ್ನಷ್ಟು ಉತ್ತಮ ಕೆಲಸಗಳು ಸಮಾಜಕ್ಕೆ ಮಾದರಿಯಾಗಲಿ ಎಂದರು.
ಭಾರತೀಯ ವೈದ್ಯಕೀಯ ಸಂಘ ಜಿಲ್ಲಾಧ್ಯಕ್ಷ ಡಾ. ಶ್ರೀರಂಗ ಡಾಂಗೆ ಅವರು ಮಾತನಾಡಿ, ಐವಿಎಫ್ ಚಿಕಿತ್ಸೆ ಎಂಬುದು ಬಡವರ ಕೈಗೆ ಸಿಗದೇ ಇರುವಷ್ಟು ದುಬಾರಿಯಾಗಿತ್ತು ಆದರೆ ಹಾಸನದಲ್ಲಿ ಇಂತಹ ಒಂದು ಸಂಸ್ಥೆಯನ್ನು ಸ್ಥಾಪಿಸಿ ಬಡವರಿಗೂ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಸಂತಾನ ಭಾಗ್ಯ ಕಾರುಣಿಸಲು ಮುಂದಾಗಿರುವ ಸಂತಸ ಐವಿಎಫ್ ಸಂಸ್ಥೆಯ ಸೌಲಭ್ಯಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಸಂತಸ ಐವಿಎಫ್ ಸಂಸ್ಥೆಯ ನಿರ್ದೇಶಕಿ ಸೌಮ್ಯ ದಿನೇಶ್ ಮಾತನಾಡಿ, 2008ರಲ್ಲಿ ಹಾಸನಕ್ಕೆ ಪ್ರಥಮವಾಗಿ ಸ್ಥಾಪಿತವಾದ ನಮ್ಮ ಸಂಸ್ಥೆ ಈವರೆಗೂ ಸಾವಿರಾರು ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸಿದೆ. ಅತ್ಯುನ್ನತ ಚಿಕಿತ್ಸಾ ವಿಧಾನಗಳ ಮೂಲಕ ದಂಪತಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ವಿಶಿಷ್ಟ ಸ್ಥಾನಮಾನ ಹೊಂದಿದೆ ಎಂದರು.
ಅಂತರಾಷ್ಟ್ರೀಯ ಗುಣಮಟ್ಟದ ಐವಿಎಫ್ ಚಿಕಿತ್ಸಾ ಸೌಲಭ್ಯ ಹಾಗೂ ಅತ್ಯುನ್ನತ ಗರ್ಭಕೋಶ ದರ್ಶಕ ಮತ್ತು ಉದರ ದರ್ಶಕ ಚಿಕಿತ್ಸಾ ಸೇವೆಗಳನ್ನು ಹೊಂದಿರುವ ಭಾರತದ ಕೆಲವೇ ಸಂಸ್ಥೆಗಳಲ್ಲಿ ಸಂತಸ ಐವಿಎಫ್ ಸಂಸ್ಥೆ ಕೂಡ ಒಂದು. 2014ರಲ್ಲಿ ತನ್ನ ಸೇವೆಗಳನ್ನು ಮೈಸೂರಿಗೆ ವಿಸ್ತರಿಸಲು ಸಂತಸ ಐವಿಎಫ್ ಸಂಸ್ಥೆ ಮುಂದಾಯಿತು ಇದೀಗ ಅಲ್ಲಿಯೂ ಗುಣಮಟ್ಟದ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದರು.
ಸಂತಸ ಸಂಸ್ಥೆಯಲ್ಲಿ ವಿಶ್ವಮಟ್ಟದ ಸಂತಾನ ಚಿಕಿತ್ಸೆ ಲಭ್ಯವಿದ್ದು ಅಂಡಾಣುಗಳ ಬೆಳವಣಿಗೆ ಗಮನಿಸಲು ನಿಖರವಾದ ಸ್ಕ್ಯಾನಿಂಗ್, ಗರ್ಭಕೋಶದೊಳಗೆ ವೀರ್ಯಧಾರಣೆ, ಪ್ರನಾಳ ಶಿಶು ಸೌಲಭ್ಯ, ಸೇರಿದಂತೆ ಇನ್ನಿತರ ಸೌಲಭ್ಯಗಳಿದ್ದು ಅಂಡಾಣು ವೀರ್ಯಾಣು ಹಾಗೂ ಬ್ರೂಣದ ಶೀತಲೀಕರಣದ ವ್ಯವಸ್ಥೆಯನ್ನು ಸಂಸ್ಥೆ ಹೊಂದಿದೆ ಇದರ ಸಾದ್ಯೋಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಡಾ.ಶ್ರೀ ವಿದ್ಯಾ ಮಾತನಾಡಿ, ನಮ್ಮ ಸಂಸ್ಥೆವತೆಯಿಂದ ಅನೇಕ ಬಡ ದಂಪತಿಗಳಿಗೆ ಉಚಿತ ಹಾಗೂ ಕನಿಷ್ಠ ದರದಲ್ಲಿ ಟೆಸ್ಟ್ ಟ್ಯೂಬ್ ಬೇಬಿ ಚಿಕಿತ್ಸೆ ನೀಡುವ ಮಾನವೀಯ ಕೆಲಸಗಳನ್ನು ನಮ್ಮ ಸಂಸ್ಥೆ ಮಾಡುತ್ತಿದೆ, ಐವಿಎಫ್ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಗಳಾದ ಬ್ರೂಣ ಹ್ಯಾಚಿಂಗ್, ಸೇರಿದಂತೆ ಅತ್ಯುನ್ನತ ವೈದ್ಯಕೀಯ ಸೌಲಭ್ಯಗಳು ಇವೆ. ಗರ್ಭಧಾರಣೆಗಿಂತ ಮುನ್ನ ಭೋಣಗಳ ಪರೀಕ್ಷೆ ಸೌಲಭ್ಯವನ್ನು ಮೊಟ್ಟಮೊದಲ ಬಾರಿಗೆ ಹಾಸನ ಮತ್ತು ಮೈಸೂರಿಗೆ ಪರಿಚಯಿಸಿದ ಕೀರ್ತಿ ಸಂತಸ ಐವಿಎಫ್ ಸಂಸ್ಥೆಗೆ ಸಲ್ಲುತ್ತದೆ ಈ ಬಗ್ಗೆ ಮಾಹಿತಿ ಇಲ್ಲದವರಿಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ಕೂಡ ಅನೇಕ ಕಾರ್ಯಕ್ರಮಗಳನ್ನು ಸಂಸ್ಥೆ ವತಿಯಿಂದ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಂ ನ ಅರವಳಿಕೆ ತಜ್ಞ ಡಾ. ವಿನಾಯಕ್, ಜಿಲ್ಲಾ ದಂತ ಪರಿಷತ್ ಅಧ್ಯಕ್ಷೆ ಡಾ. ಪ್ರೀತಿ ಮೋಹನ್, ಡಾ. ಭಾರತಿ ರಾಜಶೇಖರ್, ಡಾ.ರಂಗಲಕ್ಷ್ಮಿ, ಡಾ.ದಿವ್ಯ, ಡಾ. ವಿನೋದ್, ಡಾ. ಆದರ್ಶ್ ಇತರರು ಇದ್ದರು.