ತಜ್ಞ ವೈದ್ಯರಿಂದ ತಪಾಸಣೆ ಮನವಿ ಮಾಡಿದ ಬಳ್ಳೂರು ಉಮೇಶ್
ಹಾಸನ: ಅನಾರೋಗ್ಯದ ಹಿನ್ನಲೆಯಲ್ಲಿ ನಗರದ ಮಣಿಸೂಪರ್ ಸ್ಪೇಷಲಿಟಿಸ್ ಆಸ್ಪತ್ರೆಯಲ್ಲಿ ಗುರುವಾರ ಚಿಕಿತ್ಸೆಗೆ ದಾಖಲಾಗಿರುವ ಸಾಲುಮರದ ತಿಮ್ಮಕ್ಕ ಅವರನ್ನು ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಆರ್ .ಗಿರೀಶ್ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಹೊಟ್ಟೆ ನೋವು ಹಾಗೂ ವಯೋವೃದ್ದ ಕಾಯಿಲೆಯಿಂದ ಬಳಲುತ್ತಿರುವ ಸಾಲುಮರದ ತಿಮ್ಮಕ್ಕ ಅವರು ಬೇಗ ಗುಣಮುಖರಾಗಲಿ ಸಮಾಜಕ್ಕೆ ಪ್ರಕೃತಿಮಾತೆಯ ಕೊಡುಗೆ ಅಪಾರವಾಗಿದೆ.ಇವರ ಪರ ಜಿಲ್ಲಾಡಳಿತ ಸದಾ ಇರುತ್ತದೆ ಚಿಕಿತ್ಸೆ ಅಗತ್ಯ ಸೌಲಭ್ಯ ದೊರಕಿಸಿಕೊಡಲು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದ ಜಿಲ್ಲಾಧಿಕಾರಿ ತಿಮ್ಮಕ್ಕಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸ್ಥಳದಲ್ಲಿದ್ದ ವೈದ್ಯರಿಗೆ ಸೂಚಿಸಿದರು.
ಈ ವೇಳೆ ಅವರ ದತ್ತು ಪುತ್ರ ಉಮೇಶ್ ವಿನೋದ್ ಜಿಲ್ಲಾಧಿಕಾರಿಗಳಿಗೆ ಅವರಿಗೆ ಮನವಿ ಮಾಡಿ , ತಿಮ್ಮಕ್ಕ ಅವರು ಚೇತರಿಕೆಯಾದ ನಂತರ ಅವರು ವಾಸವಿರುವ ಬಳ್ಳೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಅಜ್ಜಿಯ ಆರೋಗ್ಯದಲ್ಲಿ ಆಗಾಗ ಏರುಪೇರು ಆಗುವ ಕಾರಣ ಇವರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ವಿಚಾರಿಸಲು ಜಿಲ್ಲಾಡಳಿತದಿಂದ ಒಬ್ಬ ತಜ್ಞ ವೈದ್ಯರನ್ನು ನೇಮಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಚಿಕಿತ್ಸೆ ವ್ಯವಸ್ಥೆ ಮಾಡಿಕೊಡಲಾಗುವುದು ಭಯ ಪಡುವ ಅಗತ್ಯವಿಲ್ಲ.ಜಿಲ್ಲಾಡಳಿತ ನಿಮ್ಮ ಜೊತೆ ಇರುತ್ತದೆ ಎಂದುಧೈರ್ಯ ತುಂಬಿದರು.
ಸದ್ಯಕ್ಕೆ ತಿಮ್ಮಕ್ಕ ಅವರ ಆರೋಗ್ಯ ಸ್ಥಿತಿಸ್ಥಿರವಾಗಿದೆ. ಡಿಸಿ ಭೇಟಿ ನಂತರ ಡಿಹೆಚ್ಓಡಾ.ಸತೀಶ್ ಭೇಟಿನೀಡಿ ಆರೋಗ್ಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದು ಸೂಕ್ತಚಿಕಿತ್ಸೆಗೆ ಕ್ರಮವಹಿಸಲಾಗುವುದು ಎಂದು ತಿಮ್ಮಕ್ಕ ಅವರಿಗೆ ಧೈರ್ಯ ತುಂಬಿದರು. ಈ ವೇಳೆ ವಾರ್ತಾಧಿಕಾರಿ ಇದ್ದರು.
Tags
Hassan