ಹಾಸನ,ಮೇ.28:- ನಗರದ ವಿವಿದೆಡೆ ಬಾಕಿ ಉಳಿದಿರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕರಾದ ಪ್ರೀತಂ ಜೆ. ಗೌಡ ಅವರು ತಿಳಿಸಿದ್ದಾರೆ.
ಸತ್ಯಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಡೇಗೌಡನ ಕೊಪ್ಪಲು ಹಾಗೂ ವಿದ್ಯಾ ನಗರದ ರಸ್ತೆ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿ ಈ ಎರಡು ರಸ್ತೆ ಅಭಿವೃದ್ಧಿಗಾಗಿ ತಲಾ 25 ಲಕ್ಷ ರೂಗಳ ಅನುದಾನ ಒದಗಿಸಿದ್ದು, ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಹಾಸನ ವಿಧಾನ ಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಯವರು 100 ಕೋಟಿ ರೂಗಳ ಅನುದಾನ ಬಿಡುಗಡೆ ಮಾಡಿದ್ದು ಅದರಲ್ಲಿ ಜಯನಗರ, ಚಿಕ್ಕ ಹೊನ್ನೇನಹಳ್ಳಿ, ಗೌರಿಕೊಪ್ಪಲು ಹಾಗೂ ವಿವಿಧ ಗ್ರಾಮಗಳಿಂದ ನಗರವನ್ನು ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಪ್ರೀತಂ ಜೆ. ಗೌಡ ಅವರು ಹೇಳಿದರು.
ರಸ್ತೆಗಳು ಅಭಿವೃದ್ಧಿಯಾಗದ ಕಾರಣ ಮಳೆ ನೀರು ಮನೆ ಒಳಕ್ಕೆ ನುಗ್ಗುತ್ತಿದೆ. ಶೀಘ್ರವಾಗಿ ರಸ್ತೆ, ಚರಂಡಿಗಳನ್ನು ಸರಿಪಡಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದು, ಅವರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡವನ್ನು ಕ್ವಾರಂಟೈನ್ ಮಾಡುವ ಅವಶ್ಯಕತೆ ಇದೆ ಹಾಗಾಗಿ ಅವರಿಗೆ ಶೀಘ್ರವಾಗಿ ಪೂರಕವಾದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕರಾದ ಪ್ರೀತಂ ಗೌಡ ತಿಳಿಸಿದರು.
Tags
ಹಾಸನ