ಹಾಸನ ಗದ್ದೆಹಳ್ಳಿ, ದೇವು ಲೇ ಹೌಟ್ ವಾಸಿ ಪಿರ್ಯಾದಿ ಫಯಾಜ್ ಅರ್ಷ್ ರವರ ನಾದಿನಿ ಶಬ್ರೀನ್ ಆಯಿಷಾ ರವರನ್ನು ಹಾಸನ ಟೌನ್ ನ ಹುಣಸಿನಕೆರೆ ವಾಸಿ ಇಸ್ಮಾಯಿಲ್ ರವರಿಗೆ ವಿವಾಹ ಮಾಡಿಕೊಟ್ಟಿದ್ದು ಮದುವೆ ಸಮಯದಲ್ಲಿ ಹಣ ಹಾಗೂ ಇತರೆ ವಸ್ತುಗಳನ್ನು ನೀಡಿ ಮದುವೆ ಮಾಡಿಕೊಟ್ಟಿದ್ದು ಮದುವೆಯಾಗಿ ಕೆಲವು ತಿಂಗಳುಗಳ ನಂತರ ಶಬ್ರೀನ್ ಆಯಿಷಾ ರವರ ಅತ್ತೆ ಗಂಡ ಹಾಗೂ ಗಂಡನ ಮನೆಯವರು ಮಾನಸಿಕ ದೈಹಿಕ ಹಿಂಸೆ ನೀಡಲು ಪ್ರಾರಂಬಿಸಿದ್ದು ನಂತರ ಅವರು ಹೆರಿಗೆಗಾಗಿ ಇಂಟಿತೊಳಲು ಗ್ರಾಮಕ್ಕೆ ಬಂದಿದ್ದು ಹೆಣ್ಣುಮಗು ಜನಿಸಿದ್ದ ಕಾರಣಕ್ಕೆ ಆರೋಪಿಗಳು ಪಿರ್ಯಾದಿ ನಾದಿನಿ ೫ ಲಕ್ಷ ರೂಗಳನ್ನು ತಂದರೆ ಮಾತ್ರ ಮನೆಗೆ ಸೇರಿಸುವುದಾಗಿ ಹೇಳಿದ್ದು ಈ ವಿಚಾರವಾಗಿ ದಿನಾಂಕ: ೦೪-೬-೨೦೨೦ ರಂದು ಸಂಜೆ ೦೫-೩೦ ಗಂಟೆ ಸಮಯದಲ್ಲಿ ಶಬ್ರೀನ್ ಆಯಿಷಾ ರವರ ಮನೆಯ ಹತ್ತಿರ ಆರೋಪಿಗಳು ಹಾಗೂ ಗ್ರಾಮದ ಮುಖಂಡರ ಸಮಕ್ಷಮ ಮಾತನಾಡುತ್ತಿದ್ದಾಗ ಆರೋಪಿಗಳು ಪಿರ್ಯಾದಿ ಹಾಗೂ ಅವರ ನಾದಿನಿಯವರಿಗೆ ಕಲ್ಲಿನಿಂದ ಮತ್ತು ಕೈಗಳಿಂದ ಹೊಡೆದು ನೋವುಂಟು ಮಾಡಿರುತ್ತಾರೆ ಎಂದು ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
Tags
ಹಾಸನ
