ಸಕಲೇಶಪುರ ಪಕ್ಷ ಸಂಘಟನೆ ಗೆ ಕಾಂಗ್ರೆಸ್ ಸಿದ್ದಯ್ಯ ಮಿಂಚಿನ ಸಂಚಾರ

 

 ಸಕಲೇಶಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ಜುಲೈ 2ರಂದು ನಡೆಯಲಿದೆ.
 ಅದ್ಭುತ ಪದಗ್ರಹಣಕ್ಕೆ ಆನ್ಲೈನಲ್ಲಿ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ. ಸಕಲೇಶಪುರ ತಾಲೂಕಿನಲ್ಲಿ ಬೆಳಗೋಡು, ಹೆತ್ತೂರ್, ಹಾನಬಾಳು ಹೋಬಳಿಯ 26 ಗ್ರಾಮ ಪಂಚಾಯತ್ ಮಟ್ಟದ ಸಭೆಗಳು ಸಕಲೇಶಪುರ ಉಸ್ತುವಾರಿ  ಮಂಜುನಾಥ್ ರವರು ಹಾಗೂ ಮುಖಂಡರಾದ ಕಾಂಗ್ರೆಸ್ ಸಿದ್ದಯ್ಯನವರು, ತಾಲೂಕು ಅಧ್ಯಕ್ಷರಾದ ಭಾಸ್ಕರ್ ರವರು, ಮುಖಂಡರುಗಳಾದ ವಿದ್ಯಾಶಂಕರ್,  ಕೌಡಳ್ಳಿ ಲೋಹಿತ್, ಬಿ. ಕೆ ಮಹೇಶ್, ದೇವಿಹಳ್ಳಿ ಪಾಪು  ಅವರು,  ಡಿ.ಸಿ ಸಣ್ಣಸ್ವಾಮಿ.ಮುಫೀಜ್, ಬೈಕೆರೆ ದೇವರಾಜ್, ಪುರಸಭೆ ಸದಸ್ಯ ಅಣ್ಣಪ್ಪ, ತಾಲೂಕು ಪಂಚಾಯಿತಿ ಸದಸ್ಯರು,  ಪುರಸಭಾ ಸದಸ್ಯರು,  ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು,  ಎಲ್ಲಾ ಘಟಕದ ಅಧ್ಯಕ್ಷರು ಸದಸ್ಯರು ಕಾರ್ಯಕರ್ತರು  ಜೊತೆ ಸಭೆ ನಡೆಸಿ,  ಯಶಸ್ವಿಯಾಗಿ ನೆರವೇರಿಸಲು  ತಂತ್ರಜ್ಞಾನ  ಬಳಸಿ ರೂಪುರೇಷೆಗಳು ಸಿದ್ದಗೊಳಿಸಲಾಗಿದೆ. 
 ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಸ್ಯಾನಿಟೈಸರ್ ಉಪಯೋಗಿಸಿ ಸರ್ಕಾರದ ನಿಯಮ ನಿಬಂಧನೆಗಳನ್ನು ಪಾಲಿಸಲು ಸೂಚಿಸಲಾಗಿದೆ. 
 ಡಿಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಎಲ್ಲಾ ಕಾರ್ಯಕರ್ತರು ಅವರೊಟ್ಟಿಗೆ ಪ್ರತಿಜ್ಞಾವಿಧಿ ತೆಗೆದುಕೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ. ವಿಶೇಷವಾಗಿ ಪ್ರತಿಯೊಬ್ಬ ಕಾರ್ಯಕರ್ತರು ಅಧ್ಯಕ್ಷರೇ ಎಂಬ ಭಾವನೆ ಹಾಗೂ ಸಂವಿಧಾನ ಪೀಠಿಕೆ ಓದುವುದರ ಮೂಲಕ ಸಂವಿಧಾನದ ಆಶೋತ್ತರಗಳ ಉಳಿವಿಗಾಗಿ ವಿನೂತನ ಪ್ರಯತ್ನ ನಡೆಸಲಾಗುತ್ತಿದೆ. 
ಹಾಗೂ ಕರೋನವೈರಸ್ ಬಗ್ಗೆ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗುತ್ತದೆ. ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಮನವಿ ಮಾಡಿಕೊಳ್ಳುತ್ತಿದ್ದೇವೆ ವಿಶೇಷವಾಗಿ ಸಕಲೇಶಪುರದಲ್ಲಿ ಮುಂದಿನ ದಿನಗಳಲ್ಲಿ ಜನ ಸಾಮಾನ್ಯರ ದ್ವನಿಯಾಗಿ ಹೋರಾಟ ನಡಸಲಿದೆ. ಕಾರ್ಯಕರ್ತರು ಉತ್ಸಾಹ ನೋಡಿ ಮುಂದಿನ ದಿನಗಳಲ್ಲಿ ನಾವು ಇಲ್ಲಿ ಅಧಿಕಾರ ಮಾಡುವುದು ನಿಶ್ಚಿತ ಎಂದು ತಾ ಪಂ ಮಾಜಿ ಉಪಾಧ್ಯಕ್ಷ ಯಡೆಹಳ್ಳಿ ಮಂಜುನಾಥ್ ತಿಳಿಸಿದರು.

Post a Comment

Previous Post Next Post