ಪ್ರಕೃತಿ ಸೇವೆ ಮಾಡುವ ಮೂಲಕ ಋಣ ತೀರಿಸಬೇಕು: ಎಂ. ಕೆ. ಕಮಲ್ ಕುಮಾರ್

ಹಾಸನ: ಭಾರತದ ಪ್ರಜೆಗಳಾದ ನಾವು ಸಮಾಜಕ್ಕೆ ಕೊಡುಗೆಯಾಗಿ ಪ್ರತಿನಿತ್ಯ ಪ್ರಕೃತಿ ಸೇವೆ ಮಾಡುವ ಮೂಲಕ ಋಣ ತೀರಿಸಬೇಕು ಎಂದು ಸೇವಾದಳ ಜಿಲ್ಲಾಧ್ಯಕ್ಷರಾದ ಎಂ.ಕೆ. ಕಮಲ್ ಕುಮಾರ್ ಅವರು ತಿಳಿಸಿದ್ದಾರೆ.
ಭಾರತ ಸೇವಾದಳ ಮತ್ತು ಹೆಚ್.ಡಿ.ಎಫ್.ಸಿ. ಬ್ಯಾಂಕ್ ಲಿಮಿಟೆಡ್ ಮತ್ತು ನಗರಸಭೆಯ ಸಹಕಾರದೊಂದಿಗೆ ರೋಟರಿ ಕ್ಲಬ್ ಆಫ್ ಹೊಯ್ಸಳ ಹಾಸನ ಇವರ ವತಿಯಿಂದ ಮಹರಾಜ ಪಾರ್ಕ್‍ನಲ್ಲಿ ಇಂದು ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಅನುಪಮ ಅವರು ಮಾತನಾಡಿ ಅರಣ್ಯ ಇಲಾಖೆಯಿಂದ ಪರಿಸರ ಸಂಬಂದಿತ ಕಾರ್ಯಕ್ರಮಗಳೆಲ್ಲದಕ್ಕೂ ಅರಣ್ಯ ಇಲಾಖೆಯವರ ಸಂಪೂರ್ಣ ಸಹಕಾರವಿದೆ ಎಂದರು. 

ಹೆಚ್.ಡಿ.ಎಫ್.ಸಿ. ಬ್ಯಾಂಕ್ ನ ವ್ಯವಸ್ಥಾಪಕರಾದ ಆನಂದ್. ಪಿ ರವರು ಮಾತನಾಡಿ  ಬ್ಯಾಂಕ್ ಹಣಕಾಸಿನ  ವ್ಯವಹಾರವಲ್ಲದೆ ಹಲವಾರು ಸಾಮಾಜಿಕ ಕಾರ್ಯಕ್ರಮ ದಲ್ಲಿ ನಮ್ಮ ಬ್ಯಾಂಕ್ ನಂ 1 ಆಗಿದ್ದು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ ಎಂದರು. ಗಿಡಗಳೆಲ್ಲವನ್ನು ಚನ್ನರಾಯಪಟ್ಟಣದಿಂದ ತಂದಂತಹ ರಾಷ್ಟ್ರಪ್ರಶಸ್ತಿ ವಿಜೇತರು ಪರಿಸರವಾದಿಗಳು ಆದ ಚ.ನಾ. ಅಶೋಕಣ್ಣನವರು ಪ್ರತಿಯೊಬ್ಬರು ಸಹ ಮನೆಯಲ್ಲಿ ಮಕ್ಕಳಂತೆ ಗಿಡಮರಗಳನ್ನು ಪಾಲಿಸಿ ಪೋಷಿಸುವ ಮೂಲಕ ಪ್ರಕೃತಿ ಮಾತೆಯನ್ನು ಸಾಕಿ ಸಲಹಲು ಕರೆ ನೀಡಿದರು. 
ಕಾರ್ಯಕ್ರಮದಲ್ಲಿ ಮೊದಲಿಗೆ ಸೇವಾದಳದ ಸರ್ವಧರ್ಮಿಯ ಪ್ರಾರ್ಥನೆ ಹಾಡಲಾಯಿತು. ಕಾರ್ಯಕ್ರಮದ ಆಯೋಜನೆ ಮತ್ತು ನಿರೂಪಣೆಯನ್ನು ಭಾರತ ಸೇವಾದಳದ ವಲಯ ಸಂಘಟಿಕರಾದ ರಾಣಿ .ವಿ.ಎಸ್ ರವರು ನಡೆಸಿಕೊಟ್ಟರು. 
ಕಾರ್ಯಕ್ರಮದಲ್ಲಿ  ಭಾರತ ಸೇವಾದಳ ಕಾರ್ಯದರ್ಶಿ  ಗಿರೀಶ್ ಚನ್ನವೀರಪ್ಪ  ಮತ್ತು ಸಿಟಿ ಕೋ ಆಪ್ ರೇಟಿವ್ ಉಪಾದ್ಯಕ್ಷರಾದ  ಶಿವಪ್ರಸಾದ್‍ರವರು .ಮತ್ತು  ಕ.ರಾ ರ ಸಾ ಸಂಸ್ಥೆಯ ಮಲ್ಲಿಕಾರ್ಜುನ ರವರು .ಹೆಚ್ ಡಿ ಎಫ್ .ಸಿ ಭ್ಯಾಂಕ್ ಲಿ .ನ ವ್ಯವಸ್ಥಾಪಕರಾದ ಸತೀಶ್ ಕುಮಾರ್ ರವರು  ಕೃಷಿ ಸಾಲ ಪ್ರಭಂದಕರಾದ. ವಿನಯ್.ಬಿ ರವರು ಹಾಗೂ ರೋಟರಿ ಕ್ಲಬ್‍ನ  ಮಾಜಿ ಅಸಿಸ್ಟೆಂಟ್ ಗವರ್ನರ್ ಮೋಹನ್ ರವರು .ಹೊಯ್ಸಳ ಕ್ಲಬ್ ನ ಅಮೃತ ಆರಾದ್ಯ ರವರು ಪೂಜಾ ರಘುನಂದನ್ ರವರು ಅರುಣ್ ರವರು ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಎಲ್ಲಾ ಸಿಬ್ಬಂದಿ ವರ್ಗದ ವರು ಭಾಗವಹಿಸಿದ್ದರು. 
ಪಾರ್ಕ್‍ನಲ್ಲಿ ಸುಮಾರು ನೂರಾರು ಬಗೆಯ ಗಿಡಗಳನ್ನು ನೆಡಲಾಯಿತು.

Post a Comment

Previous Post Next Post