ಬೇಲೂರು; ಯಗಚಿ ಜಲಾಶಯದ ಹಿನ್ನೀರು ಪ್ರದೇಶವಾದ ಗೆಂಡೇಹಳ್ಳಿ, ಮೂಡಿಗೆರೆ ತಾಲ್ಲೂಕಿನ ಹಲವು ಭಾಗದಲ್ಲಿ ಅತ್ಯಧಿಕ ಮಳೆ ಬರುತ್ತಿರುವ ಹಿನ್ನಲೆಯಲ್ಲಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದು ಪರಿಣಾಮ ಜಲಾಶಯ ಭರ್ತಿಯಾಗಿ ನೀರನ್ನು ೫ ಕ್ರಸ್ಟ್ ಗೇಟ್ ತೆರೆದು ನದಿಗೆ ಬಿಡಲಾಯಿತು.
![]() |
| ಬೇಲೂರು ಯಗಚಿ ಜಲಾಶಯ ಭರ್ತಿಯಾಗಿ ನೀರನ್ನು ನದಿಗೆ ಬಿಡಲಾಗಿದೆ |
ಕಳೆದ ಮೂರು ದಿನಗಳೆಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಯಗಚಿ ಜಲಾಶಯ ಭರ್ತಿಯಾಗಿದೆ. ೩.೬೦೩ ಟಿಎಂಸಿ ನೀರು ಸಾಮರ್ಥ್ಯದ ಜಲಾಶಯದಲ್ಲಿ ೩.೪೧೦ ನೀರು ಸಂಗ್ರಹವಾಗಿದ್ದು, ಒಳಹರಿವು ೧೨೦೦ ಕ್ಯೂಸೆಕ್ಸ್ ಇದೆ. ಜಲಾಶಯದಿಂದ ಹರಿದು ಬರುತ್ತಿರುವ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಜಲಾನಯನ ಪ್ರದೇಶ ಹಾಗೂ ನದಿಯ ಅಕ್ಕಪಕ್ಕದಲ್ಲಿ ಯಾವುದೇ ಜನ, ಜಾನುವಾರುಗಳು ಪ್ರವೇಶಿಸಬಾರದು ಎಂದು ಎಇ ಶಿವಕುಮಾರ್ ತಿಳಿಸಿದ್ದಾರೆ.
Tags
ಬೇಲೂರು
