ಸಕಲೇಶಪುರ: ಕರೂನಾ ಶಂಕೆ ಹಿನ್ನೆಲೆಯಲ್ಲಿ ತಾಲೂಕಿನ ಮೂಗಲಿ ಗ್ರಾಮವನ್ನು ಅಧಿಕಾರಿಗಳು ಸೀಲ್ಡೌನ್ ಮಾಡಿದ್ದಾರೆ.
ಗ್ರಾಮದ 70 ವರ್ಷದ ವೃದ್ದೆಗೆ ಕರೂನಾ ವೈರಸ್ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ತಾಲೂಕು ಆಡಳಿತ ಮುಂಜಾಗ್ರತ ಕ್ರಮವಾಗಿ ಗ್ರಾಮದ ಮೂರು ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಜನರು ಓಡಾಡದಂತೆ ಬಂದ್ ಮಾಡಿ 100 ಮೀಟರ್ಗೆ ಕಂಟೋನ್ಮೆಂಟ್ ಜೋನ್ ಹಾಗೂ 200 ಮೀಟರ್ ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಘೋಷಿಸಲಾಗಿದ್ದು ಯಾವುದೆ ಅಗತ್ಯವಸ್ತುಗಳ ಅಗತ್ಯವಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿರುವ ತಾಲೂಕು ಆಡಳಿತ ಗ್ರಾಮದಿಂದ ಯಾರು ಹೊರ ಹೋಗುವಂತಿಲ್ಲ ಹಾಗೂ ಯಾರು ಗ್ರಾಮಕ್ಕೆ ಬರಬಾರದು ಎಂದು ಎಚ್ಚರಿಕೆ ನೀಡಿದೆ.
ವೃದ್ಧೆಯ ಹಿನ್ನೆಲೆ:
ಸುಮಾರು 70 ವರ್ಷದ ವೃದ್ದೆ ಪುತ್ರ,ಸೂಸೆ ಹಾಗೂ ಕಣ್ಣುಕಾಣದ ಹೆಣ್ಣಮಗಳೊಂದಿಗೆ ವಾಸಿಸುತ್ತಿದ್ದು, ಕಳೆದ ಮಳೆಗಾಲದ ವೇಳೆ ಮನೆಯ ಮುಂದೆ ಜಾರಿಬಿದ್ದು ಕಾಲುಮುರಿದು ಕೊಂಡಿದ್ದರು ಪರಿಣಾಮ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ, ಕಾಲು ನೋವು ಸಂಪೂರ್ಣ ವಾಸಿಯಾಗದ ಕಾರಣ ಆಗಾಗ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಳೆದ ಒಂದು ವಾರದ ಹಿಂದೆ ಕಾಲುನೋವು ಹೆಚ್ಚಾದ ಕಾರಣ ಬಾಳ್ಳುಪೇಟೆ ಗ್ರಾಮದ ಮಂಗಳೂರು ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ, ನೋವು ಹೆಚ್ಚಾದ ಕಾರಣ ಪಟ್ಟಣದ ಕಮಲ್ದೇವ್ ನರ್ಸಿಂಗ್ ಹೋಂ ಚಿಕಿತ್ಸೆಗೆ ತೆರಳಿದ್ದರು ಅಲ್ಲಿ ಪರೀಕ್ಷಿಸಿದ ವೈದ್ಯರು ಸರ್ಕಾರಿ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು. ಇಲ್ಲಿಂದ ವೃದ್ದೆ ಹಾಸನ ಸರ್ಕಾರಿ ಆಸ್ಪತ್ರೆಗೆ ತೆರಳಿ ಒಳರೋಗಿಯಾಗಿ ಚಿಕಿತ್ಸೆ ಪಡೆದು ಕಳೆದ ಮೂರು ದಿನಗಳ ಹಿಂದೆ ಬಿಡುಗಡೆಯಾಗಿದ್ದರು. ಆದರೆ, ಬಿಡುಗಡೆಯಾದ ಮರುದಿನವೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮತ್ತೆ ಅದೇ ಆಸ್ಪತ್ರೆಗೆ ದಾಖಲಾಗಿದ್ದರು ಈ ವೇಳೆ ವೃದ್ದೆಯ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿದ್ದ ವೇಳೆ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.
Tags
ಸಕಲೇಶಪುರ