ಹನುಮಜಯಂತಿಗೆ ಅಯೋಧ್ಯೆಮಂದಿರ ಸ್ಥಬ್ಧಚಿತ್ರ

 ಬೇಲೂರು: 

ಪಟ್ಟಣದ ಲಕ್ಷ್ಮಿಪುರ ಬಡಾವಣೆಯಲ್ಲಿರುವ ಶ್ರೀವೀರಾಂಜನೇಯಸ್ವಾಮಿ ದೇಗುಲದಲ್ಲಿ ಹನುಮಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಬೇಲೂರಿನ ಶ್ರೀವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಹನುಮನ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು

ಮುಂಜಾನೆಯಿಂದಲೇ ದೇವರಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಆಂಜನೇಯಸ್ವಾಮಿ ಭಜನಾ ಮಂಡಳಿಯವರು ಭಜನೆ ನಡೆಸಿಕೊಟ್ಟರು. ಶ್ರೀನಿವಾಸ್ ಹಾಗೂ ಅವರ ಪುತ್ರ ಮಂಗಳವಾಧ್ಯ ನುಡಿಸಿದರು. ಆಂಜನೇಯ ಭಕ್ತರು ಹನುಮಜಯಂತಿ ಪ್ರಯುಕ್ತ ಮಾಲಾಧಾರಣೆ ಮಾಡಿದರು. ದೇವಾಲಯ ಆವರಣವನ್ನು ತಳಿರು ತೋರಣ, ಕೇಸರಿ ಬಂಟಿಂಗ್ಸ್ ಇಂದ ಅಲಂಕರಿಸಲಾಗಿತ್ತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಆಗಮಿಕ ಅರ್ಚಕ ಪ್ರಶಾಂತಭಟ್ಟರ್ ಪೂಜಾಕಾರ್ಯ ನೆರವೇರಿಸಿದರು.

ಈ ಸಂದರ್ಭ ದೇವಾಲಯಕ್ಕೆ ಆಗಮಿಸಿದ ರಾಷ್ಟ್ರ ಧರ್ಮ ಸಂಘಟನೆೆಯ ಸಂಸ್ಥಾಪಕ ಸಂತೋಷ್ ಕೆಂಚಾಂಭ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಮುನ್ನ ಆಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಪ್ರಾರ್ಥಿಸಿಕೊಂಡಿದ್ದೆ. ಇದೀಗ ಕಾರ್ಯಾರಂಭಗೊಂಡಿದೆ. ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಹನುಮಜಯಂತಿಯಂದು ಅಯೋಧ್ಯೆ ದೇಗುಲದ ಮಾದರಿಯನ್ನು ಸ್ಥಬ್ಧ ಚಿತ್ರದೊಂದಿಗೆ ಮೆರವಣಿಗೆ ನಡೆಸಲಾಗುವುದು ಜೊತೆಯಲ್ಲಿ ಧ್ವಜ ಸಹಿತ ಅಶ್ವರೋಹಣ ಸಹ ಇರಲಿದೆ ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿಸುರೇಶ್ ಆಗಮಿಸಿ ದೇವರ ದರ್ಶನ ಪಡೆದರು. ದೇಗುಲ ಸಮಿತಿಯವರು, ಭಕ್ತರು ಇದ್ದರು.


Post a Comment

Previous Post Next Post