ಹಾಸನ: ನಗರದ ಹೊಸ ಬಸ್ ನಿಲ್ದಾಣ ಎದುರು ಇರುವ ಹೊಸ ನ್ಯಾಯಾಲಯದ ಆವರಣದಲ್ಲಿ ಡೆಸ್ಟಿನಿ ರೈಡರ್ಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾ ನ್ಯಾಯಾಧೀಶರಾದ ಶಿವಣ್ಣನವರು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ವಿಶ್ವ ದಿನಾಚರಣೆ ಅಂಗವಾಗಿ ನೂತನ ನ್ಯಾಯಾಲಯದ ಆವರಣದಲ್ಲಿ ಸಸಿಗಳನ್ನು ನೆಡಲಾಗಿದೆ. ಡೆಸ್ಟಿನಿ ರೈಡರ್ಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿರುವ ಗಿಡ ನೆಡುವ ಕಾರ್ಯಕ್ರಮ ಉತ್ತಮವಾಗಿದೆ. ಮುಂದೆ ನ್ಯಾಯಾಧೀಶರ ನಿವಾಸದ ಆವರಣದಲ್ಲೂ ಗಿಡ ನೆಡುವ ಕಾರ್ಯಕ್ರಮ ಮಾಡಲಾಗುವುದು ಎಂದರು. ಮಳೆಕಾಲ ಆಗಿರುವುದರಿಂದ ಈ ಕಾಲದಲ್ಲಿ ಗಿಡಕ್ಕೆ ನೀರು ಹಾಕುವುದ ಬೇಡ. ಉತ್ತಮವಾಗಿ ಬೆಳೆಯುತ್ತದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷರಾದ ಜೆ.ಪಿ. ಶೇಖರ್ ಮಾತನಾಡಿ, ಮನುಕುಲ, ಜೀವರಾಶಿ ಉಳಿಯಬೇಕಾದರೇ ಹೆಚ್ಚು ಹೆಚ್ಚು ಮರಗಳು ಇರಬೇಕು. ಆ ನಿಟ್ಟಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಇದೆ ವೇಳೆ ನ್ಯಾಯಾಧೀಶರಾದ ಬಸವರಾಜು, ಡೆಸ್ಟಿನಿ ರೈಡರ್ಸ್ ಸಂಸ್ಥೆಯ ಅಧ್ಯಕ್ಷರಾದ ದೇಶ್ ಭೂಷಣ್ ಜೈನ್, ನಾಗೇಂದ್ರ ಪ್ರಸಾದ್, ಮುಕ್ತಿಶ್ ಜೈನ್, ಸಂಪತ್, ಮಹಾವೀರ್ ಜೈನ್, ಬುಲ್, ವಿನಯ್, ಪುನೀತ್ ಗೌಡ ಇತರರು ಪಾಲ್ಗೊಂಡಿದ್ದರು.
Tags
ಹಾಸನ