ಅರಸೀಕೆರೆ: ತಾಲ್ಲೂಕಿನ ಪ್ರಭಾವಿ ರಾಜಕಾರಣಿಯ ಬೆಂಗಳೂರಿನ ಆಪ್ತರೊಬ್ಬರಿಗೆ ರೆಮಿಡಿಸಿವರ್ ರವಾನೆ, ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ನೀಡಬೇಕಾದ ರೆಮಿಡಿಸಿವರ್ ಬೆಂಗಳೂರಿಗೆ ರವಾನಿಸಿದ ಅಧಿಕಾರಿಗಳು
ರಾಜ್ಯಾದ್ಯಂತ ಬೆಡ್ ಬ್ಲಾಕಿಂಗ್ ದಂಧೆ ಸದ್ದು ಮಾಡುತ್ತಿರುವ ಬೆನ್ನಲ್ಲೇ ಅರಸೀಕೆರೆ ತಾಲ್ಲೂಕಿನಲ್ಲಿ ರೆಮಿಡಿಸಿವರ್ ಮಾರಾಟ ದಂಧೆ ಸದ್ದು ಮಾಡುತ್ತಿದೆ, ಹೌದು ಅರಸೀಕೆರೆ ಸರಕಾರಿ ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳಿಗೆ ಬಳಸಬೇಕಾದ ರೆಮಿಡಿಸಿವರ್ ಅವನ್ನು ಶಾಸಕರ ಆಪ್ತರೊಬ್ಬರಿಗೆ ರವಾನೆ ಮಾಡಿದ ದಂಧೆ ಈಗ ತಡಾವಗಿ ಬೆಳಕಿಗ ಬಂದಿದೆ,
ಸ್ವತಃ ಶಾಸಕರಿಂದಲೇ ರೆಮಿಡಿಸಿವರ್ ರವಾನೆಯಾಗಿದ್ದು ಇಲ್ಲಿ ಶಾಸಕರ ದಬ್ಬಾಳಿಕೆಗೆ ಆರೋಗ್ಯಾಧಿಕಾರಿ, ವೈದ್ಯರು ಮೂಕಪ್ರೇಕ್ಷಕರಾಗಿದ್ದರೊ ಅಥವಾ ಅವರೂ ಕೂಡ ಶಾಮೀಲಾಗಿದ್ದಾರೋ ತನಿಖೆ ನಡೆಸಿ ಬೆಳಕಿಗೆ ಎಳೆಯಬೇಕಿದೆ.
ಈ ವಿಷಯವನ್ನು ಸ್ವತಃ ಶಾಸಕರೆ ಅಧಿಕಾರಿಗಳ ಸಮ್ಮುಖದಲ್ಲಿ ಕೊಚ್ಚಿಕೊಳ್ಳುತ್ತಾ ಹೇಳಿಕೊಂಡಿದ್ದು ಮಾತ್ರ ವಿಪರ್ಯಾಸವೆಂದರೆ ತಪ್ಪಾಗದು
Tags
ಅರಸೀಕೆರೆ