ಆಲೂರು : ಸಂತೆ ಸ್ಥಳಾಂತಕ್ಕೆ ಯಾವುದೇ ಅವಕಾಶ ವಿಲ್ಲ. ಸ್ವಚ್ಚತೆಯ ದೃಷ್ಠಿಯಿಂದ ವಾಟೆಹೊಳೆ ಜಲಾಶಯದ ಇಲಾಖೆಗೆ ಸೇರಿದ ಕವರ್ಡಕ್ ಜಾಗದಲ್ಲಿ ವಾರದ ಸಂತೆಯನ್ನು ನಡೆಸಲಾಗುವುದು. ದಿನವಾಹಿ ಬೀದಿ ತರಕಾರಿ ವ್ಯಾಪಾರಸ್ಥರಿಗೆ ಸದ್ಯದಲ್ಲಿಯೇ ಸೂಕ್ತಜಾಗದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಸಿಕೊಡಲಾಗುವುದು ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಹೃದಯಭಾಗದಲ್ಲಿ ಈ ಹಿಂದೆ ನಡೆಯುತ್ತಿದ್ದ ಸಂತೆ ಜಾಗಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು. ಕರೋನಾ ವೈರಸ್ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ವಚ್ಚತೆಗೆ ಹೆಚ್ಚು ಅದ್ಯತೆ ನೀಡಬೇಕು ಅ ನಿಟ್ಟಿನಲ್ಲಿ ಪಟ್ಟಣದ ಹೃದಯಭಾಗದಲ್ಲಿ ತಾಲೂಕು ಆಸ್ಪತ್ರೆ ಎದುರು ನಡೆಯುತ್ತಿದ್ದ ತರಕಾರಿ ಮಾರುಕಟ್ಟೆಯನ್ನು ವಾಟೆಹೊಳೆ ಜಲಾಶಯಕ್ಕೆ ಸೇರಿದ ಕವರ್ಡಕ್ ಜಾಗ ವಿಶಾಲವಾಗಿದ್ದು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರಿಹೋಗುತ್ತದೆ ಅಲ್ಲಿ ಮಾರುಕಟ್ಟೆ ಮೇಲೆ ನಡೆನಡೆಸಲು ಸಮಿತಿ ತೀರ್ಮಾನಿಸಿ ಅವಕಾಶ ಕಲ್ಪಿಸಿತ್ತು. ಆದರೆ ವ್ಯಾಪಾರಸ್ಥರು ವ್ಯಾಪಾರಕ್ಕೆ ತೊಂದರೆಯುಂಟಾಗುತ್ತಿದೆ ಎಂದು ದೂರಿದ ದೂರಿನ ಅಧಾರಮೇಲೆ ಪಟ್ಟಣಕ್ಕೆ ಹತ್ತಿರ ಹಾಗೂ ಅನುಕೂಲವಾಗುವಂತಹ ಸ್ಥಳವನ್ನು ಸದ್ಯದಲ್ಲಿ ಗುರುತಿಸಿ ಸಭೆ ನಡೆಸಿ ಅವಕಾಶ ಕಲ್ಪಿಸಿಕೊಡಲಾಗುವುದು. ಯಾವುದೇ ಕಾರಣಕ್ಕೂ ಮತ್ತೆ ಸಂತೆ ಸ್ಥಳಾಂತಕ್ಕೆ ಅವಕಾಶ ವಿರುವುದಿಲ್ಲ.
ಈ ಹಿಂದೆ ಸಂತೆ ನಡೆಯುತ್ತಿದ್ದ ಜಾಗದಲ್ಲಿ ತರಕಾರಿ ವ್ಯಾಪರಸ್ಥರಿಗೆಂದು ನಿರ್ಮಾಣವಾಗಿದ್ದ ಎಲ್ಲ ತರಕಾರಿ ಕಟ್ಟೆಗಳನ್ನು ತೆರವುಗೊಳಿಸಿ ಸದ್ಯದಲ್ಲಿ ತೆರವುಗೊಳಿಸಿ ಅ ಜಾಗದಲ್ಲಿ ವಾಹನಗಳ ನಿಲುಗಡೆಗೆ ಅನುಕೂಲವಾಗಲು ವ್ಯವಸ್ಥೆ ಮಾಡಲಾಗುವುದು. ದಿನವಾಹಿ ಹಾಗೂ ಬೀದಿಬದಿ ವ್ಯಾಪಾರಿಗಳ ವ್ಯವಹಾರಕ್ಕೆಂದು ಖಾಲಿ ಇರುವ ಜಾಗಗಳನ್ನು ಗುರುತಿಸಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಎಪಿಎಂಸಿ ಅಧ್ಯಕ್ಷರಾದ ಕೆ ಎಸ್ ಮಂಜೇಗೌಡ ಮಾತನಾಡಿ, ಆಲೂರು ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾದಂತೆ ಜನಜಂಗುಳಿ ಹೆಚ್ಚಾಗುತ್ತಿದೆ ಆದರಿಂದ 20 ವರ್ಷಗಳಿಂದ ಸಂತೆ ಸ್ಥಳವನ್ನು ಸ್ಥಳಾಂತರಿಸಬೇಕೆಂದು ಹೋರಾಟ ಮಾಡುತ್ತ ಬಂದಿದ್ದು ಇತ್ತೀಚಿಗೆ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಆದೇಶ ನೀಡಿದ ಹಿನ್ನೆಯಲ್ಲಿ ಹೆಚ್ಚು ಜನ ಸೇರುತ್ತಿದ್ದ ಸಂತೆಸ್ಥಳವನ್ನು ಸ್ಥಳಾಂತರಿಸಲಾಗಿದೆ ಅಲ್ಲಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ತಹಸೀಲ್ದಾರ್ ಶಿರೀನ್ ತಾಜ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಸತೀಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ತೌಫಿಕ, ಅಬ್ದುಲ್ ಖುದ್ದುಸ್, ಸಬ್ ಇನ್ಸ್‍ಪೆಕ್ಟರ್ ಸತ್ಯನಾರಾಣ್, ಬೀದಿಬದಿ ವ್ಯಾಪಾರಸ್ಥರ ಸಂಘದ ಅದ್ಯಕ್ಷ ಪ್ರಶಾಂತ್ ಗಾಂಧಿ, ದಲಿತ ಮುಖಂಡರಾದ ಬಸವರಾಜು, ಅರಸಯ್ಯ ಸೇರಿದಂತೆ ವ್ಯಾಪಾರಸ್ಥರು ಹಾಜರಿದ್ದರು.
Tags
ಆಲೂರು