ಅರಸಿ ಪಾರ್ಕ್ ಬಳಿ ಗಾಂಜ ಮಾರಾಟ ಮಾಡುತ್ತಿದ್ದ ಜಾಲ ಬಂಧನ.

ಅರಸೀಕೆರೆ ನಗರದ ಕಂತೆನಹಳ್ಳಿ ಬಳಿ ಇರುವ 'ಅರಸಿ ಪಾರ್ಕ್' ನ ಬಳಿ   ಗಾಂಜ ಮಾರಾಟ ಮಾಡುತ್ತಿದ್ದ ಜಾಲವೊಂದನ್ನ  ಭೇದಿಸಲಾಗಿದೆ.


 ಖಚಿತ ಮಾಹಿತಿಯನ್ನಾಧರಿಸಿ   ಅರಸೀಕೆರೆ ನಗರ ಪೊಲೀಸ್ ಇನ್ಸ್ಪೆಕ್ಟರ್  ಸೋಮೇಗೌಡ ಸಿಬ್ಬಂದಿಗಳಾದ ರಂಗಸ್ವಾಮಿ, ಕೀರ್ತಿಕುಮಾರ್,ಹರೀಶ್, ರಘು, ನಾಗರಾಜ್ ರೊಂದಿಗೆ ದಾಳಿ ನಡೆಸಿ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್  ಪಾಲಕ್ಷ, 
ಅರಣ್ಯ ಇಲಾಖೆ ಅಧಿಕಾರಿಗಳು,  ಕಂದಾಯ ಇಲಾಖೆಯ  ರವಿನ್ಯೂ ಇನ್ಸ್ಪೆಕ್ಟರ್ ಮಂಜುನಾಥ್ ಇದ್ದರು.

ಆರೋಪಿಯನ್ನು ವಶಕ್ಕೆ ಪಡೆದಿರುವ ಖಾಕಿ ಪಡೆ ಕೇಸ್ ದಾಖಲಿಸಿಕೊಂಡು, ಹೆಚ್ಚಿನ ತನಿಖೆ ನಡೆಸುತ್ತಿದೆ. 

ವರದಿ - ಎಸ್ ಎಲ್ ಎನ್ ಯೋಗೇಶ್

Post a Comment

Previous Post Next Post