ಸೀಲ್ ಡೌನ್ ಕುಟುಂಬಗಳಿಗೆ ಕಿಟ್ ವಿತರಿಸಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿದ ಹುಲ್ಲಳ್ಳಿ ಸುರೇಶ್

ಬೇಲೂರು ವಿಧಾನಸಭಾ ಕ್ಷೇತ್ರದ ಹಳೇಬೀಡು ಹೋಬಳಿಯ ಚೀಲನಾಯಕನಹಳ್ಳಿ  ಗ್ರಾಮದಲ್ಲಿ Covid-19 ಸಮಸ್ಯೆಯಿಂದ ಗ್ರಾಮವನ್ನು  ಸೀಲ್ ಡೌನ್ ಮಾಡಲಾಗಿದೆ. ಈ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಪಡಿತರ ಕಿಟ್, ಮಾಸ್ಕ್ ಹಾಗೂ  ಸ್ಯಾನಿಟೈಸರ್ ಗಳನ್ನು ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರಾದ ಹೆಚ್.ಕೆ.ಸುರೇಶ್(ಹುಲ್ಲಳ್ಳಿ ಸುರೇಶ್)ರವರು ನೆನ್ನೆ  ಗ್ರಾಮಕ್ಕೆ ಭೇಟಿ ನೀಡಿ ಸೀಲ್ ಡೌನ್ ಆದಂತಹ ಕುಟುಂಬಗಳಿಗೆ ಕಿಟ್ ಗಳನ್ನು ವಿತರಿಸಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೋಹನ್, ತಿಮ್ಮಪ್ಪ, ಪ್ರತಿಭಾ ಶಿವಕುಮಾರ್, ವಿಜಯ್ ಕುಮಾರ್, ಪ್ರಸನ್ನ, ರಮೇಶ, ಶಶಿಧರ್, ಶಿವನಾಗ್, ಗುರುಧತ್ತ್, ಹಾಗೂ ಗ್ರಾಮದ ಮುಖಂಡರುಗಳು, ಹಿರಿಯರು ಉಪಸ್ಥಿತರಿದ್ದರು.

Post a Comment

Previous Post Next Post