ನಾಳೆ ನೆಡೆಯುವ ದ್ವೀತಿಯ ಪಿ,ಯು,ಸಿ ಇಂಗ್ಲಿಷ್ ಪರೀಕ್ಷೆಗೆ ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಳಲಾಗಿದೆ ಎಂದು ಬಾಲಕಿಯರ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕರಾದ ಹರೀಶ್ ತಿಳಿಸಿದರು .
ಅವರಿಂದು ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನೆಡೆದ ಪರೀಕ್ಷಾ ಪೂರ್ವ ಸಿದ್ದತ ಸಭೆಯಲ್ಲಿ ಮಾತಾನಾಡಿ ನಮ್ಮ ತಾಲ್ಲೂಕಿನ 1920 ಮಕ್ಕಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ ನಮ್ಮ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜು ಒಳಗೊಂಡಂತೆ 650 ಮಕ್ಕಳು ಪರೀಕ್ಷೆ ಬರೆಯುತ್ತಿದ್ದರೆ ಬಾಲಕರ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 570 ಮಕ್ಕಳು ಹಾಗೂ ಬಿ,ಜಿ,ಎಸ್,ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 700 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ, ಮಕ್ಕಳ ಹಿತ ದೃಷ್ಟಿಯಿಂದ ಕಾಲೇಜಿನ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸರ್ ನಿಂದ ಶುಚಿಗೊಳಿಸಲಾಗಿದೆ ಮತ್ತು ಪರೀಕ್ಷೆ ಬರೆಯಲು ಬರುವ ಮಕ್ಕಳ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು ಸಾಮಾಜಿಕ ಅಂತರ ಕಯುವುದರ ಜೊತೆಗೆ ಮಾಸ್ಕ ಕಡ್ಡಾಯ ಮಾಡಲಾಗಿದೆ ,ಪರೀಕ್ಷೆ ಬೆಳಗ್ಗೆ 10 ಯಿಂದ 1.30 ರವರೆಗೆ ನಡೆಯಲಿದೆ ಎಂದು ತಿಳಿಸಿದರು
Tags
ಅರಕಲಗೂಡು