ಬೇಲೂರು:ತಾಲೂಕಿನ ಕಾಚಿಹಳ್ಳಿ ಗಡಿಯಲ್ಲಿ ಕೋಳಿ ತುಂಬಿದ್ದ ಟಾಟಾ ಎಸ್ ಗಾಡಿ ಮುಗಿಚಿ ಸುಮಾರು ಇನ್ನೂರಕ್ಕೂ ಅಧಿಕ ಕೋಳಿ ಸಾವನ್ನಪ್ಪಿದೆ.
ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿರುವ ಮಲ್ಲಿಕ ಚಿಕನ್ ಸೆಂಟರ್ ಮಾಲೀಕ ಮಲ್ಲಿಕಾರ್ಜುನ ಅವರು ತಮ್ಮ ಟಾಟಾ ಏಸ್ ಗಾಡಿಯಲ್ಲಿ ಕೋಳಿ ತುಂಬಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಬಾರಿ ಮಳೆಯಿಂದಾಗಿ ರಸ್ತೆಯಲ್ಲಿ ಕೆಸರು ತುಂಬಿದ್ದ ಪರಿಣಾಮ ಟಾಟಾ ಎಸ್ ಪಲ್ಟಿಯಾಗಿ ಗಾಡಿಯಲ್ಲಿದ್ದಂತ ಸುಮಾರು ೨೦೦ ಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದ್ದು, ಚಾಲಕ ಹಾಗೂ ಮಾಲೀಕರಿಗೆ ಸ್ವಲ್ಪ ಗಾಯಗಳಾಗಿದ್ದು,ಅದೃಷ್ಟವಶಾತ್ ಯಾರಿಗೂ ಪ್ರಾಣಪಾಯ ಸಂಭವಿಸಿಲ್ಲ.
Tags
ಬೇಲೂರು