ಕ್ರೈಸ್ಥ ಚಿನ್ನೆಗೆ ಗೌರವ ನೀಡಲು ಹೋಗಿ ರಾಷ್ಟ್ರಧ್ವಜಕ್ಕೆ ಅಪಮಾನ

ಚನ್ನರಾಯಪಟ್ಟಣ : ಪಟ್ಟಣದ ಕೋಟೆ ಬಡಾವಣೆಯಲ್ಲಿನ ಕ್ರೈಸ್ಟ್ ಡಿ ಕಿಂಗ್ ಪಿಯು ಕಾಲೇಜಿನ ಆಡಳಿತ ಮಂಡಳಿ ರಾಷ್ಟ್ರದ್ವಜ ಸ್ಥಂಭವನ್ನು 15 ರಿಂದ 20 ಅಡಿ ನಿರ್ಮಿಸಿ ಕ್ರೈಸ್ಥ ಚಿನ್ನೆಯ ಸ್ಥಂಭವನ್ನು 35 ರಿಂದ 40 ಅಡಿ ಎತ್ತರದಲ್ಲಿ ನಿರ್ಮಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ಧಾರೆ ಎಂದು ಆರೋಪಿಸಿ ಯುವಬ್ರಿಗೇಡ್ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಧರಣಿ ನಡೆಸಿದರು.
ಧರಣಿ ನಿರತರು ಮಾತನಾಡಿ ಕಾಲೇಜಿನ ಆವರಣದಲ್ಲಿ ರಾಷ್ಟ್ರಧ್ವಜಕ್ಕೆ ನೀಡಲಾಗದ ಗೌರವ ಒಂದು ಮತದ ಚಿನ್ನೆ ಹೊಂದಿರುವ ಧ್ವಜಕ್ಕೆ ನೀಡಲಾಗುತ್ತಿದೆ, ರಾಷ್ಟ್ರಶಕ್ತಿ ಹಾಗೂ ಸರ್ವಧರ್ಮದ ಬಗ್ಗೆ ಶಿಕ್ಷಣ ನೀಡಬೇಕಾಗಿರುವ ಸಂಸ್ಥೆಗಳು ಒಂದು ಮತದ ಪ್ರಚಾರ ಕೇಂದ್ರಗಳಾಗುತ್ತಿವೆ, ಈ ಬಗ್ಗೆ ಪ್ರಶ್ನೆ ಮಾಡದೆ ಹೋದರೆ ಪಟ್ಟಣದಲ್ಲಿ ಮತಾಂತರ ಮಾಡುವವರ ಸಂಖ್ಯೆ ಹೆಚ್ಚಲಿದೆ ಎಂದು ಹೇಳಿದರು.
ಕ್ರೈಸ್ಟ್ ಡಿ ಕಿಂಗ್ ಪಿಯು ಕಾಲೇಜಿನಲ್ಲಿ ಎಲ್ಲಾ ಧರ್ಮದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ಧಾರೆ ಆದರೆ ಅಲ್ಲಿನ ಆಡಳಿತ ಮಂಡಳಿ ಒಂದು ಧರ್ಮದ ಪ್ರಚಾರಕ್ಕೆ ಒತ್ತು ಕೊಡುತ್ತಿರುವುದು ತಿಳಿಯುತ್ತಿದೆ, ಜಾತ್ಯಾತೀತತೆಯನ್ನು ವಿದ್ಯಾರ್ಥಿಗಳಿಗೆ ಹೇಳ ಬೇಕಿರುವ ಸಂಸ್ಥೆಗಳು ಯಾಕೆ ಈ ರೀತಿಯಾಗಿ ಮಾಡುತ್ತಿವೆ ಇದರ ಹಿಂದೆ ಯಾರಿದ್ದಾರೆ, ಶಿಕ್ಷಣದ ಹೆಸರಿನಲ್ಲಿ ಅನ್ಯ ಕಾರ್ಯಗಳು ನಡೆಯುತ್ತಿರುವ ಶಂಖೆ ವ್ಯಕ್ತವಾಗುತ್ತಿದೆ ಎಂದು ಆಪಾದನೆ ಮಾಡಿದರು.
ಹಿಂದುಗಳು ಯಾವುದೇ ಜಾತಿಯ ವಿರೋಧ ಮಾಡುವುದಿಲ್ಲ ಕಾಲೇಜಿನ ಆವರಣದಲ್ಲಿ ರಾಷ್ಟ್ರಧ್ವಜಕ್ಕೆ ಹೆಚ್ಚು ಒತ್ತು ನೀಡಬೇಕು ಆದರೆ ಒಂದು ಮತದ ಚಿನ್ನೆಗೆ ಯಾಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ, ನಾವು ಬರುವ ವಿಷಯ ತಿಳಿದು ಕಾಲೇಜಿನ ಪ್ರಮುಖರು ಇತ್ತ ಬಂದಿಲ್ಲ ಕಾಲೇಜಿನ ಉಪನ್ಯಾಸಕರನ್ನು ಈ ಬಗ್ಗೆ ಪ್ರಶ್ನೆ ಮಾಡಿದರೆ ಮನಬಂದಂತೆ ಉತ್ತರ ನೀಡುತ್ತಾರೆ, ಕಾಲೇಜಿನ ಆವರಣದಲ್ಲಿ ಇರುವ ಒಂದು ಮತದ ಚಿನ್ನೆಗೆ ಬದಲಾಗಿ ಎಲ್ಲಾ ಧರ್ಮದ ಚಿನ್ನೆಯನ್ನು ಹಾಕಲಿ ಎಂದು ಒತ್ತಾಯಿಸಿದರು.
ಧರಣಿ ನಿರತ ಸ್ಥಳಕ್ಕೆ ಪಿಎಸ್‌ಐ ಕಿರಣ್ ಕುಮಾರ್ ಆಗಮಿಸಿ ಕಾಲೇಜಿನ ಆಡಳಿತ ಮಂಡಳಿ ಜೊತೆ ಚರ್ಚಿಸಿ ಕ್ರೈಸ್ಥ ಚಿನ್ನೆ ಇರುವ ಧ್ವಜದ ಸ್ಥಂಬವನ್ನು ತೆರವು ಮಾಡಿಸುತ್ತೇವೆ ಎಂದು ಭರವಸೆ ನೀಡಿದ ಮೇಲೆ ಧರಣಿ ಕೈ ಬಿಡಲಾಯಿತು, 

ಯುವಬ್ರಿಗೇಡ್ ತಾಲೂಕು ಸಂಚಾಲಕ ಧರಣೀಶ್, ಸಹಸಂಚಾಲಕ ಕೆರೆಬೀದಿ ಜಗದೀಶ್, ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷ ಶಾಮಸುಂದರ್ ಕೆ. ಅಣ್ಣೇನಹಳ್ಳಿ, ತಾಲೂಕು ಅಧ್ಯಕ್ಷ ಮಂಜೇಗೌಡ, ಪ್ರಮುಖರಾದ ಕೀರ್ತಿರಾಜ್, ಆನಂದ, ದತ್ತ, ಕುಮಾರಸ್ವಾಮಿ, ಸತೀಶ, ಮನೋಜ್, ದೀಪು ಮೊದಲಾದವರು ಉಪಸ್ಥಿತರಿದ್ದರು.

Post a Comment

Previous Post Next Post