ಬೂವನಹಳ್ಳಿ ಗ್ರಾಮಸ್ಥರೊಂದಿಗೆ ಬೂವನಹಳ್ಳಿ ಕೆರೆ-ಕಟ್ಟೆಗಳ ಸಂರಕ್ಷಣೆ

ಇಂದು ಸಂಜೆ 5.30  ಗಂಟೆಗೆ ಹಸಿರು ಭೂಮಿ ಪ್ರತಿಷ್ಠಾನದಿಂದ  ಬೂವನಹಳ್ಳಿ ಗ್ರಾಮಸ್ಥರೊಂದಿಗೆ ಬೂವನಹಳ್ಳಿ  ಕೆರೆ-ಕಟ್ಟೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಹಾಗೂ ಉದ್ಯಾನವನಗಳ ನಿರ್ಮಾಣ ಮತ್ತು ನಿರ್ವಹಣೆಯ ಕುರಿತು ಸಾರ್ವಜನಿಕ ಸಭೆಯನ್ನು ಹಾಗೂ ಪಿಪಿಟಿ ಶೋ ಅನ್ನು ಬೂವನಹಳ್ಳಿ ಶ್ರೀ ಚನ್ನಕೇಶವ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಇದೇ ಸಂದರ್ಭದಲ್ಲಿ ಬೂವನಹಳ್ಳಿ ಗ್ರಾಮ ಸ್ವರಾಜ್ ಸಮಿತಿಯನ್ನು ಪ್ರಾರಂಭಿಸಲು ದೇಣಿಗೆಯನ್ನು ಸ್ಥಳೀಯರು ಮತ್ತು ಪ್ರತಿಷ್ಠಾನದ ಟ್ರಸ್ಟಿಗಳು ಎಲ್ಲರೂ ನೀಡಿದರು. 27ಸಾವಿರ ನಗದು, 21000 ನಗದು ನೀಡುವದಾಗಿ ಬರವಸೆ ಮತ್ತು ಏಳು ಸಾವಿರ ರೂಗಳ ತಂತಿಯನ್ನು ನೀಡುವುದಾಗಿ ಭರವಸೆ ನೀಡಿದರು ಒಟ್ಟಾರೆಯಾಗಿ 54000 ರೂ ದೇಣಿಗೆ ಸಂಗ್ರಹವಾಯಿತು.
ಸಭೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಅಪ್ಪಾಜಿ ಗೌಡ್ರು ಟ್ರಸ್ಟಿಗಳಾದ ಆರ್ ಪಿ ವೆಂಕಟೇಶಮೂರ್ತಿ, ಸುಬ್ಬು ಸ್ವಾಮಿ, ಪುಟ್ಟಯ್ಯನವರು, ಡಾಕ್ಟರ್ ಮಂಜುನಾಥ್, ವೆಂಕಟೇಗೌಡ, ಚಿನ್ನೇನಹಳ್ಳಿ ಸ್ವಾಮಿ, ತಿಮ್ಮೇಶಪ್ರಭು, 
ಪಿಡಿಓ ಪ್ರಕಾಶ್ , ತಾಲೂಕು ಪಂಚಾಯತ್ ಸದಸ್ಯರಾದ ಜಯರಾಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕರಿಯಪ್ಪ
ಗ್ರಾಮ ಪಂಚಾಯತಿ ಸದಸ್ಯರಾದ ಭಾಗ್ಯಮ್ಮ ಪತ್ರಕರ್ತರಾದ ಬೊಮ್ಮೇಗೌಡ,  ವಕೀಲರಾದ ಮನು ಡೈರಿ ಕಾರ್ಯದರ್ಶಿಯಾದ ಮಂಜು, ಮಲ್ಲೇಶ್ ಐವತ್ತಕ್ಕೂ ಹೆಚ್ಚು ಗ್ರಾಮಸ್ಥರು ಮಹಿಳೆಯರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.

Post a Comment

Previous Post Next Post