ರಾಮನಾಥಪುರ ಬಸವೇಶ್ವರ ವೃತ್ತದಲ್ಲಿ ಬಸ್

ರಾಮನಾಥಪುರ:- ಪ್ರಯಾಣಿಕರ ಕೊರತೆಯಿಂದ ಗಂಟೆಗಟ್ಟಲೇ ವಿವಿಧ ಭಾಗಗಳಿಗೆ ಹೋಗುವ ಬಸ್‍ಗಳು ಬಸ್ ನಿಲ್ದಾಣದಲ್ಲಿ ಕಂಡುಬಂದವು. 
ಇದಕ್ಕೆ ಕಾರಣ ಕೊರೊನಾ ಸೋಂಕು ಇನ್ನೂ ಜನರಲ್ಲಿ ಅವರಿಸಿದೆ ಎನ್ನುತ್ತಾರೆ ಪ್ರಯಾಣಿಕರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ಸಂಚರಿಸಲು ಹಿಂಜರಿಯುತ್ತಿದ್ದಾರೆ. ರಾಮನಾಥಪುರ ಬಸ್ ನಿಲ್ದಾಣದಲ್ಲಿ ಹಾಸನ, ಮಡಿಕೇರಿ, ಮೈಸೂರು ಮುಂತಾದ ಕಡೆಗಳಿಗೆ ಹೋಗುವ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. 
ಪ್ರಯಾಣಿಕರ ನಿರೀಕ್ಷೇಯಲ್ಲಿ ಚಾಲಕರು ಮತ್ತು ನಿರ್ವಹಕರು ಕಾಯುತ್ತಿದ್ದು, ಕಂಡುಬಂತ್ತು ಗರಿಷ್ಠ ಸುಮಾರು 30 ರಿಂದ 40 ಜನನಾದರೂ ಪ್ರಯಾಣಿಕರು ಇರಬೇಕು ಅಲ್ಲಿಯವರೆಗೆ ಬಸ್ ಹೊರಡುವಂತಿಲ್ಲ. ಕೆಲವು ಪ್ರಯಾಣಿಕರು ಬಸ್‍ನಲ್ಲಿ ಕುಳಿತ್ತು ಜನರತ್ತ ಕಾಯುತ್ತಿದ್ದರು. ಬಸ್ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಅದೇಶ ಪಾಲಿಸಲು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಿರ್ವಹಕರು ಪ್ರಯಾಣಿಕರಿಗೆ ತಿಳಿಹೇಳುತ್ತಿದ್ದರು. ಪ್ರಯಾಣಿಕರು ಬಸ್‍ನಲ್ಲಿ ಅಪೇಕ್ಷೆ ಪಡೆದೇ ಖಾಸಗಿ ವಾಹನಗಳು ಮತ್ತು ತಮ್ಮಲ್ಲಿರುವ ವಾಹನಗಳಲ್ಲೇ ಪ್ರಯಾಣಿಸುತ್ತಿದ್ದಾರೆ

Post a Comment

Previous Post Next Post