ರಾಮನಾಥಪುರ:- ವಿವಿಧ ಗ್ರಾಮದ ಶಾಲೆಗಳ ಆವರಣದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಮತ್ತು ಐ ಟಿ ಸಿ ಪ್ರಾಯೋಜಕತ್ವದ ಭೈಫ್ ಅಭಿವೃದ್ದಿ ಯೋಜನೆಯವತಿಯಿಂದ 50 ಸಸಿಗಳನ್ನು ನೆಟ್ಟು ಸಾರ್ವಜನಿಕರಿಗೆ 500 ವಿವಿಧ ಹಣ್ಣಿನ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಡಾ. ಎ.ಟಿ. ರಾಮಸ್ವಾಮಿ ತಿಳಿಸಿದರು.
ರಾಮನಾಥಪುರ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಅವರು ಅರಣ್ಯ ಇಲಾಖೆಯಿಂದ ರಾಮನಥಪುರ ಬಸವಪಟ್ಟಣ, ಕೇರಳಾಪುರ ಮುಂತಾದ ಶಾಲೆಗಳಿಗೆ ವಿವಿಧ ರೀತಿಯ ಸಸಿಗಳನ್ನು ನೀಡಲಾಗುತ್ತಿದ್ದು, ನೆಟ್ಟ ಸೊಸಿಗಳನ್ನು ಅರೈಕೆ ಮಾಡಿಕೊಂಡು ಉತ್ತಮ ರೀತಿ ಪೋಷಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡಮರಗಳ ಪೋಷಣೆಯ ಜವಬ್ದಾರ ಹೋರಬೇಕಾಗಿದೆ. ಅದರಿಂದ ಪರಿಷರ ಉಳಿಸಲು ಪ್ರತಿಯೊಬ್ಬನಾಗರಿಕರೂ ಸಹಕರಿಸಬೇಕು ಎಂದರು.
ಮಳೆಯಿಂದಾಗಿ ರಸ್ತೆಯು ಬೇಗ ಹಾಳಾಗುವ ಸಾಧ್ಯತೆಯಿದ್ದು ಗುಣಮಟ್ಟದ ಕಾಮಗಾರಿಗೆ ಅಧಿಕಾರಿಗಳು, ಗುತ್ತಿಗೆದಾರರು ಗಮನಹರಿಸಬೇಕೆಂದು ಸೂಚನೆ ನೀಡಲಾಗಿದೆ. ಹೇಮಾವತಿ ಪುನರ್ವಸತಿ ವಿಭಾಗದ ಅನುದಾನದಿಂದ ಹೀಲಗೆರೆ ಗ್ರಾಮದ ಸಂಪರ್ಕ ಕಲ್ಪಿಸುವ 51 ಲಕ್ಷ ರೂ ವೆಚ್ಚದ , 50 ಲಕ್ಷ ರೂ ವೆಚ್ಚದ ಕೆಸವತ್ತೂರಿನಿಂದ-ಪೆಮ್ಮನಹಳ್ಳಿಯ ಸಂಪರ್ಕ ರಸ್ತೆ ಮತ್ತು ನೆಹರೂನಗರದಲ್ಲಿ 35 ಲಕ್ಷ ರೂ ವೆಚ್ಚದ ರಸ್ತೆನಿರ್ಮಾಣಕ್ಕೆ ಸುಳುಗೋಡುಸೋಮವಾರ ಗ್ರಾಮದಲ್ಲಿ ರಸ್ತೆನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಸಿ. ಅಬ್ಬೂರು, ವಡವಾನಹೊಸಹಳ್ಳಿ, ಹಿರೇಹಳ್ಳಿ, ವಿ.ಜಿ. ಕೊಪ್ಪಲು ಗ್ರಾಮಪರಿಮಿತಿಯಲ್ಲಿ 20 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆಗೆ ಗುದ್ದಲೀಪೂಜೆ, ಚಿಕ್ಕಹಳ್ಳಿ ಗ್ರಾಮಪರಿಮಿತಿಯಲ್ಲಿ 15 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆಗೆ ಗುದ್ದಲೀಪೂಜೆ, ಕಬ್ಬಳಿಗೆರೆ ಹಾಗೂ ಬಿದರೂರು ಗ್ರಾಮ ಪರಿಮಿತಿಯಲ್ಲಿ 30 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆಗೆ ಗುದ್ದಲಿಪೂಜೆ, ಬಿದರೂರು ಗ್ರಾಮದಲ್ಲಿ 13 ಲಕ್ಷ ರೂ ವೆಚ್ಚದ ಓವರ್‍ಹೆಡ್ ಟ್ಯಾಂಕ್‍ಗೆ ಗುದ್ದಲೀಪೂಜೆ ನೆರವೇರಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ರಂಗಸ್ವಾಮಿ, ಸಾದೀಕ್ ಮುಂತಾದವರು ಇದ್ದರು.
Tags
ಅರಕಲಗೂಡು