ಮಾತನಾಡಿ ಮಳೆ ಬೀಳುವವಳಗಾಗಿ ರಸ್ತೆ

ರಾಮನಾಥಪುರ;- ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ ರಾಮನಾಥಪುರ, ಕೇರಳಾಪುರ ಸೋಮವಾರಪೇಟೆ ವರೆಗೀನ ಮುಖ್ಯ ರಸ್ತೆಗೆ ಡಾಬರ್ ಹಾಕುತ್ತಿರುವುದರಿಂದ ಸ್ಥಳೀಯರಲ್ಲಿ ಸಂತಸ ತಂದಿದೆ.  
ಹಾಸನ ಮತ್ತು ಕೊಡಗು ಈ ಭಾಗದ ರಾಮನಾಥಪುರ ಕೊಣನೂರು ಕೇರಳಾಪುರ ಹೊನ್ನೆನಹಳ್ಳಿ-ಕಾಳೇನಹಳ್ಳಿ ಬಸವಾಪಟ್ಟಣ- ಮೂಲೆಹುಸಹಳ್ಳಿ  ಭಾಗಗಳಲ್ಲಿ ಸಾರ್ವಜನಿಕರು ರಸ್ತೆ ಅಗಲೀಕರಣ ವೃತ್ತಗಳು, ಜನರ ಭವಿಷ್ಯದ ಅರ್ಥಿಕ ಅಭಿವೃದ್ದಿಯ ದೃಷ್ಠಿಯಿಂದ ರಸ್ತೆ ಅಗಲೀಕರಣಕ್ಕೆ  ಸಹಕರಿಸಲು ಸಾರ್ವಜನಿಕರನ್ನು ಕೋರಿದರು. ಹೆದ್ದಾರಿ ನಿರ್ಮಣಕ್ಕಾಗಿ ಸರ್ವೇ ಕೇರಳಾಪುರ-ಮಾಗಡಿ-ಸೋಮವಾರಪೇಟೆ ರಾಜ್ಯ ಹೆದ್ದಾರಿ ನಿರ್ಮಾಣ ಹಿನ್ನಲೆಯಲ್ಲಿ ಕೆ-ಶಿಫ್‍ನಿಂದ ಸರ್ವೆ ಇತ್ತೀಚಗೆ ನಡೆಸಲಾಗಿತ್ತು.                                          
ಶಾಸಕ. ಡಾ,ಎ.ಟಿ. ರಾಮಸ್ವಾಮಿ ಮಾತನಾಡಿ ಮಳೆ ಬೀಳುವವಳಗಾಗಿ ರಾಮನಾಥಪುರ, ಕೇರಳಾಪುರ ಸೋಮವಾರ ಪೇಟೆ ವ್ಯಾಪ್ತಿಯ 30 ಕಿ.ಮೀ ರಸ್ತೆಯ ಗುಡಿಗಳನ್ನು ಸಂಚಾರಕ್ಕೆ ತೊಂದರೆ ಯಾಗದಂತೆ ಡಾಂಬರೀಕರಣ ಮಾಡಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ರಾಮನಾಥಪುರ ಹೋಬಳಿ ಕೇರಳಾಪುರ ಗ್ರಾಮದಲ್ಲಿ ಕೆಶಿಪ್ ರಸ್ತೆ ಅಭಿವೃಧ್ದಿ ಪಡಿಸುವ ಸಲುವಾಗಿ ಗ್ರಾಮ ಠಾಣಾ ವ್ಯಾಪ್ತಿಯ ಕಟ್ಟಡ ಹಾಗೂ ನಿವೇಶನಗಳ ಪುನರ್ ಅಳತೆ ಕಾರ್ಯವನ್ನು ಕೆ.ಶಿಪ್. ಎಂಜಿನಿಯರ್ ಸುಹಾಸ್ ನೇತೃತ್ವದಲ್ಲಿ ನಡೆಸಲಾದ ಸಂದರ್ಭದಲ್ಲಿ ಮಾತನಾಡಿದ ಅವರು ಅಂತಿಮ ಹಂತದ ಸರ್ವೆ ಕಾರ್ಯ ಕೈಗೊಂಡು ಪ್ರತಿ 10 ಮೀಟರ್ ಅಂತರದಲ್ಲೂ ಅಳತೆ ಮಾಡಿ ಹೆದ್ದಾರಿ ನಿರ್ಮಾಣಕ್ಕೆ ಅಗತ್ಯ ವಿರುವಷ್ಟು ವಿಸ್ತೀರ್ಣವನ್ನು ಗುರುತಿಸಲಾಗುತ್ತಿದೆ ಎಂದು ತಿಳಿಸಿದರು. 

 

Post a Comment

Previous Post Next Post