ಕೊಣನೂರು : ಚಿರತೆಯೊಂದು ಮೇಕೆಯ ಮೇಲೆ ದಾಳಿ ಮಾಡಿ ಮೇಕೆಯನ್ನು ಬಲಿ ತೆಗೆದುಕೊಂಡಿರುವ ಘಟನೆ ಹೋಬಳಿಯ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಂಡ್ರಂಗಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಂಕನಹಳ್ಳ್ಳಿ ಗ್ರಾಮದ ಚಂದ್ರೇಗೌಡ ಎಂಬುವರು ಭಾನುವಾರ ರಾತ್ರಿ ಮನೆಯ ಕೊಟ್ಟಿಗೆಯಲ್ಲಿ ತಮಗೆ ಸೇರಿದ ಮೇಕೆಯನ್ನು ಕಟ್ಟಿದ್ದು ನಡುರಾತ್ರಿಯಲ್ಲಿ ಚಿರತೆಯೊಂದು ದಾಳಿ ಮಾಡಿ ಕಟ್ಟಿದ್ದ ಮೇಕೆಯನ್ನು ಹೊರಕ್ಕೆ ಎಳೆದೊಯ್ದು ಅರ್ಧಭಾಗವನ್ನು ತಿಂದು ಉಳಿದುದನ್ನು ಬಿಟ್ಟಿದೆ. ಬೆಳಿಗ್ಗೆ ಮನೆಯ ಯಜಮಾನ ಚಂದ್ರೇಗೌಡ ರವರು ಮೇಕೆ ಕಾಣದಿದ್ದರಿಂದ ಹಾಗೂ ಅಲ್ಲಿಯೇ ಬಿದ್ದಿದ್ದ ರಕ್ತದ ಕಲೆಗಳನ್ನು ನೋಡಿ ಅದನ್ನೇ ಹಿಂಬಾಲಿಸಿದಾಗ ಚಿರತೆ ತಿಂದಿರುವುದನ್ನು ನೋಡಿ ಅರಣ್ಯ ಇಲಾಖೆಯವರಿಗೆ ತಿಳಿಸಿದಾಗ ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯವರು ಪರಿಶೀಲಿಸಿ ಇದನ್ನು ಚಿರತೆಯೇ ತಿಂದಿದೆ. ಕೊಡಗಿಗೆ ಸಮೀಪವಿರುವ ಈ ಭಾಗದ ಗ್ರಾಮಸ್ಥರು ಬಹಳ ಎಚ್ಚರದಿಂದಿರಬೇಕು ಎಂದರು.
ಈ ಭಾಗದಲ್ಲಿ ಚಿರತೆ ಮೇಕೆ ಮೇಲೆ ದಾಳಿ ಮಾಡಿರುವುದರಿಂದ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪಶುವೈದ್ಯರು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
Tags
ಅರಕಲಗೂಡು