ಜಿಲ್ಲಾ ಮಹಿಳಾ ಕಾಂಗ್ರೆಸ್; ಅಧ್ಯಕ್ಷರಾಗಿ ತಾರಾ ಚಂದನ ನೇಮಕ

ಹಾಸನ; ಜಿಲ್ಲಾ ಮಹಿಳಾ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ತಾರಾ ಚಂದನ.ಡಿ ನೇಮಕಗೊಂಡಿದ್ದಾರೆ.

ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುಶ್ಮಿತಾ ದೇವ್ ಅವರ ಆದೇಶದ ಮೇರೆಗೆ ತಾರಾ ಚಂದನ .ಡಿ ಅವರನ್ನು ನೇಮಕಮಾಡಿರುವ ಬಗ್ಗೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಡಾ.ಬಿ.ಪುಷ್ಪ ಅಮರನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ತಾರಾ ಚಂದನ .ಡಿ ಅವರಿಗೆ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಯುವ ಮಹಿಳಾ ಅಧ್ಯಕ್ಷೆ ಪಿ.ಎಸ್ .ಜಮೀಲ ,ರಾಷ್ಟ್ರೀಯ ಮಂಜ್ದೂರ್ ಕಾಂಗ್ರೆಸ್ ಯುವ ಮಹಿಳಾ ಘಟಕದ ರಹೀಮಾ ,ಹಿರೀಸಾವೆ ಬ್ಲಾಕ್‌ ಅಧ್ಯಕ್ಷ ಧನಂಜಯ, ಸುಜಾತ ಆಲೂರು, ಶಕೀಲಾ ಜಾವಗಲ್ ಸೇರಿದಂತೆ ಇತರರು ಶುಭಾಶಯ ಕೋರಿದ್ದಾರೆ

Post a Comment

Previous Post Next Post