ಕೊಣನೂರು : ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಸಂಚಾರಿ ಮಾಂಸಮಾರಾಟ ಮತ್ತು ಮಾಂಸ ಖಾದ್ಯಗಳ ಮಾರಾಟಮಳಿಗೆಗೆ ಚಾಲನೆ ನೀಡುತ್ತಿರುವುದು ಸಂತಸದ ವಿಷಯವೆಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ರಾಮನಾಥಪುರದ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಸನ ವತಿಯಿಂದ ಸುಮಾರು 11 ಲಕ್ಷ ವೆಚ್ಚದ ಸಂಚಾರಿ ಮಾಂಸಮಾರಾಟ ಮತ್ತು ಮಾಂಸ ಖಾದ್ಯಗಳ ಮಾರಾಟಮಳಿಗೆಯನ್ನು ಉಧ್ಘಾಟಿಸಿ ಮಾತನಾಡಿದ ಅವರು ಸಂಚಾರಿ ಮಳೆಗೆಯಿಂದಾಗಿ ನಿರುದ್ಯೋಗಿಯೊಬ್ಬರಿಗೆ ಉದ್ಯೋಗ ನೀಡಿದಂತಾಗುತ್ತಿದೆ.
ಮಳೆಗೆಯ ಮಾಲೀಕರು ತಾಲ್ಲೂಕಿನ ಜನರಿಗೆ ಶುಚಿರುಚಿಯಾದ ಮಾಂಸ ಮತ್ತು ಮಾಂಸದ ಖಾದ್ಯವನ್ನು ಒದಗಿಸುವ ಮೂಲಕ ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಚಾರಿ ಮಳಿಗೆಯಲ್ಲಿ ನೀರಿನ ಟ್ಯಾಂಕ್, ಓಲೆ, ಪ್ರೀಜರ್, ಹ್ಯಾಂಡ್ ವಾಷ್ ಬೇಸಿನ್, ಓವನ್, ಅಡಿಗೆ ಮಾಡಲು ಸ್ಟೋವ್ ಮುಂತಾದ ವ್ಯವಸ್ಥೆಗಳನ್ನು ಒಳಗೊಂಡಿದೆ. ಶಾಸಕರು ಹಸಿರು ಬಾವುಟ ತೋರಿಸುವ ಮೂಲಕ ಮಳಿಗೆಗೆ ಚಾಲನೆ ನಿಡಿ, ಕೀಲಿಯನ್ನು ಮಾಲೀಕ ಉಳ್ಳೇನಹಳ್ಳಿ ನಾಗರಾಜು ರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಸನ ದ ಸಹಾಯಕ ನಿರ್ದೇಶಕ ಸುರೇಶ್ ಎಂ.ಎನ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ದಿಲೀಪ್ .ಎಸ್.ಎಂ, ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ತಾ.ಪಂ ಇ ಓ ರವಿಕುಮಾರ್, ಗ್ರಾ.ಪಂ ಅಧ್ಯಕ್ಷ ಕಾಳೇಗೌಡ, ರಾಜಸ್ವ ನಿರೀಕ್ಷಿಕ ಸ್ವಾಮಿ, ಪಿ ಡಿ ಓ ವಿಜಯಕುಮಾರ್, ಗ್ರಾ.ಪಂ ಸದಸ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕರಿದ್ದರು.
Tags
ಅರಕಲಗೂಡು