ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೊರದಂತೆ ನಿಗಾವಹಿಸಿ: ಆರ್. ಗಿರೀಶ್

ಹಾಸನ,ಜೂ:23 :- ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೊರದಂತೆ ನಿಗಾವಹಿಸಿ ಎಲ್ಲಾ ಗ್ರಾಮಗಳಿಗೆ ಪೈಪ್‍ಲೈನ್ ಮೂಲಕ ನೀರು ಒದಗಿಸಿ ತುರ್ತು ಅವಶ್ಯಕವಿರುವ ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಿ ಎಂದು ಎಲ್ಲಾ ತಾಲ್ಲೂಕು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಸೂಚಿಸಿದ್ದಾರೆ.
 ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಾಮಾನ್ಯ ಸಭೆ ನಡೆಸಿ ಮಾತನಾಡಿದ ಅವರು ಹಿಂಗಾರು ಮುಂಗಾರು ಹಾಗೂ ಬೇಸಿಗೆ ಬೆಳೆಗಳ ಸಮೀಕ್ಷೆ ನಡೆಸಿ ರೈತರು ಬೆಳೆಯುವ ಬೆಳೆಗಳ ಬಗ್ಗೆ ಪೂರಕ ಮಾಹಿತಿ ನೀಡಬೇಕು ಮತ್ತು ಬೆಳೆದ ಬೆಳೆಗಳ ಕುರಿತು ಮಾಹಿತಿ ಸಂಗ್ರಹಿಸಬೇಕು ಎಂದರು.

 ಪ್ರಕೃತಿ ವಿಕೋಪದಡಿ ಹಾನಿಗೊಳಗಾಗಿರುವ ಮನೆಗಳಿಗೆ ನೀಡಬೇಕಾದ ಪರಿಹಾರವನ್ನು ನೀಡಿ ಹಾಗೂ ಗಾಳಿ ಮಳೆಗೆ ಶೇ.30 ಕ್ಕಿಂತ ಹೆಚ್ಚಿನ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಒದಗಿಸಿ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಅಧಿಕಾರಿಗಳಿಗೆ ಸೂಚಿಸಿದರು.

 ವನ ಸಂವರ್ಧನೆ ಮಾಡಿ ಅರಣ್ಯ ಪ್ರದೇಶಗಳ ಸರ್ವೆ ಕಾರ್ಯ ಬಾಕಿಯನ್ನು ಶೀಘ್ರವಾಗಿ ಪೂರ್ಣ ಮಾಡಿ. ಹಾಗೆಯೇ ಅರಣ್ಯ ಪ್ರದೇಶದ ಸುತ್ತಮುತ್ತ ಸರ್ಕಾರಿ ಗೋಮಾಳಗಳಿದ್ದರೆ ಅಥವಾವ ಖಾಲಿ ಜಮೀನಿದ್ದರೆ ಅಂತಹವುಗಳನ್ನು ಗುರುತಿಸಿ ಸಕಾರದ ಯೋಜನೆಗಳಿಗೆ ಉಪಯೋಗವಾಗುತ್ತದೆ ಎಂದು ಅವರು ಅಧಿಕಾರಿಗಳಿದೆ ನಿರ್ದೇಶಿಸಿದರು.

 ಹಣದೊರೆಯದಿರುವ ಫಲಾನುಭವಿಗಳ ಪೂರ್ಣ ದಾಖಲೆಗಳನ್ನು ಪಡೆದು ಆದಾರ್ ಲಿಂಕ್ ಮಾಡಿಸಿ ಶೀಘ್ರವಾಗಿ ಹಣ ದೊರೆಯುವಂತೆ ಮಾಡಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಹೇಳಿದರು.

 ಇದೇ ವೇಳೆ ಹೊರ ರಾಜ್ಯದಿಂದ ಬಂದು ಹೋಂ ಕ್ವಾರಂಟೈನ್‍ನಲ್ಲಿರುವ ಮನೆಮನೆಗೆ ತಹಶೀಲ್ದಾರರು ಬೇಡಿ ನೀಡಿ ಮಾಹಿತಿ ಪಡೆದು ಫೋಟೋ ಅಪ್ಲೋಡ್ ಮಾಡುವಂತೆ  ಅವರು ಸೂಚಿಸಿದರು.
 
 ತಾಲ್ಲೂಕು ವೈದ್ಯಾಧಿಕಾರಿಗಳ ಸಹಾಯದೊಂದಿಗೆ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿನ ಎಲ್ಲಾ ಬಾಣಂತಿಯರ ಮಾಹಿತಿ ಸಂಗ್ರಹಿಸಿ ಹುಟ್ಟಿದ ಎಲ್ಲಾ ಮಕ್ಕಳಿಗೂ ಆಧಾರ್ ಕಾರ್ಡ ಮಾಡಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.

 ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ಮಾತನಾಡಿ ಎಲ್ಲಾ ಗ್ರಾಮಗಳ ವ್ಯಾಪ್ತಿಯಲ್ಲಿ ರುದ್ರ ಭೂಮಿಯನ್ನು ಗುರುತಿಸಿ. ಇಲ್ಲದೇ ಇರುವ ಕಡೆಗಳಲ್ಲಿ ಖಾಸಗಿ ಜಮೀನು ಖರೀಧಿಸಿ ಈ ಉದ್ದೇಶಕ್ಕೆ ಮೀಸಲಿರಿಸಿ ಎಂದು ಹೇಳಿದರು.

 ಬಾಕಿ ಉಳಿದಿರುವ ಭೂ ಸ್ವಾಧೀನ ಸ್ಥಳಗಳನ್ನು ಶೀಘ್ರವಾಗಿ ಇಂಡೀಕರಣಗೊಳಿಸಿ ಎಂದು ಅವರು ನಿರ್ದೇಶಿಸಿದರು.

 ಗ್ರಾಮಾಂತರ ಪ್ರದೇಶಗಳಿಂದ ಘನ ತ್ಯಾಜ್ಯ ವಿಲೇವಾರಿಗೆ ಸ್ಥಳಾವಕಾಶ ಬೇಡಿಕೆ ಬಂದಿದ್ದರೆ ಅಂತಹ ಗ್ರಾಮಗಳಿಗೆ ತ್ಯಾಜ್ಯ ವಿಲೇವಾರಿಗೆ ಸೂಕ್ತ ಸ್ಥಳ ನೀಡುವ ಮೂಲಕ ಉತ್ತಮ ವ್ಯವಸ್ಥೆ ಮಾಡಿ ಎಂದು ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ಅವರು ತಹಶೀಲ್ದಾರರಿಗೆ ಸೂಚಿಸಿದ್ದಾರೆ.

 ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸಾದ್ಯತೆ ಇದ್ದು, ಸರ್ಕಾರಿ ಕಟ್ಟಡಗಳು ಹಾಗೂ ಶಾಲಾ ಕಟ್ಟಡಗಳ ಕಾಮಗಾರಿಗಳಿಗೆ ಕಾರ್ಯಪಾಲಕ ಅಭಿಯಂತರರು ಭೇಟಿ ನೀಡಿ ಪರಿಶೀಲಿಸಿ ತುರ್ತಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿ ಎಂದು ತಹಶೀಲ್ದಾರರಿಗೆ ಅವರು ನಿರ್ದೇಶಿಸಿದರು.
 
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಉಪ ವಿಭಾಗಾಧಿಕಾರಿಗಳಾದ ಡಾ|| ನವೀನ್ ಭಟ್ ಹಾಗೂ ಗಿರೀಶ್ ನಂದನ್ ಹಾಗೂ ಎಲ್ಲಾ ತಾಲ್ಲೂಕು ತಹಶೀಲ್ದಾರರು ಸಭೆಯಲ್ಲಿ ಹಾಜರಿದ್ದರು.
***********

Post a Comment

Previous Post Next Post