ಹೊಳೆನರಸಿಪುರ: ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ದಿನದಿಂದ ದಿನಕ್ಕೆ ಕಡಿಮೆಯಾಗಿದ್ದರು, ಭಾರತದಲ್ಲಿ ದುಬಾರಿಯಾದ ಬೆಲೆಯಲ್ಲಿ ಮಾರಾಟವಾಗುತ್ತಿದೆ ಎಂದು ವಿವಿಧ ಸಂಘಟನೆ ಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಮುಜಾಹಿದ್, ಅಂತರಾಷ್ಟ್ರೀಯ ತೈಲ ಬೆಲೆ ಕೇವಲ 27.96 ರೂಪಾಯಿ ಆಗಿದೆ, ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಗಗನಕ್ಕೆ ಎರಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿದ್ 19 ರಿಂದ ಜನಸಾಮಾನ್ಯರ ಜೀವನ ಸಂಕಷ್ಟದ ಈ ಸಮಯದಲ್ಲಿ ಭಾರತ ಸರ್ಕಾರ ಮತ್ತು ರಾಜ್ಯ ಸರಕಾರದ ಬೆಲೆ ಏರಿಕೆ ಕ್ರಮ ಖಂಡನೀಯ.
ಮಧ್ಯಮ ಹಾಗೂ ಕೆಳವರ್ಗದ ಜನರಿಗೆ ಟ್ರಾಕ್ಟ್ ಮಾಲೀಕರಿಗೆ ಹಾಗೂ ಆಟೋ ,ಕಾರು ಚಾಲಕ ಮಾಲೀಕರಿಗೆ ಹೊರೆ ಯಾಗುತ್ತಿರುವ ಎಂದರು.
ಈ ಸಂದರ್ಭದಲ್ಲಿ ದೀಪು,ಸ್ವಾಮಿ, ರಮೇಶ ಮುಂತಾದವರು ಇದ್ದರು
Tags
ಹೊಳೆನರಸೀಪುರ