ಗರ್ಭಿಣಿ ಆರೈಕೆ ಸಹಾಯ ಧನಕ್ಕೆ ಅರ್ಜಿ ಆಹ್ವಾನ

ಹಾಸನ:-  ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಯಲ್ಲಿ ಮೊದಲನೇ ಮಗುವಿನ ಗರ್ಭಿಣಿ ಆರೈಕೆಗಾಗಿ ನೀಡುವ ನಗದು ಹಣ 5,000 ರೂ. ಗಳನ್ನು ಪಡೆಯಲು ಇಲಾಖೆ ವತಿಯಿಂದ ಅರ್ಜಿಗಳನ್ನು ಕೊಡಲಾಗುತ್ತಿದ್ದು, ಎಲ್ಲ ಮೊದಲನೆ ಮಗುವಿನ ಗರ್ಭಿಣಿಯರು ಇದರ ಪ್ರಯೋಜನ ಪಡೆಯಬೇಕಾಗಿ ಹಾಸನ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

ಲಗತ್ತಿಸಬೇಕಾದ ದಾಖಲೆಗಳು: ಗರ್ಭಿಣಿ ಸ್ತ್ರೀ ಮತ್ತು ಪತಿಯ ಆಧಾರ್ ಕಾರ್ಡ್ ಜೆರಾಕ್ಸ್, ಆರೋಗ್ಯ ತಪಾಸಣಾ ಚೀಟಿ ಜೆರಾಕ್ಸ್ ಅಥವಾ ತಾಯಿ ಕಾರ್ಡ್, ಗರ್ಭಿಣಿ ಹೆಸರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‍ನ ಪಾಸ್ ಬುಕ್ ಜೆರಾಕ್ಸ್ (ಖಾತೆಗೆ ಗರ್ಭಿಣಿ ಆಧಾರ್ ಲಿಂಕ್ ಆಗಿರಬೇಕು) ಲಗತ್ತಿಸಬೇಕು.

ವಿಶೇಷ ಸೂಚನೆ: ಸರ್ಕಾರಿ,ಅರೆ ಸರ್ಕಾರಿ ಉದ್ಯೋಗದಲ್ಲಿರುವ ಗರ್ಭಿಣಿ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲಾ ಮೊದಲನೇ ಮಗುವಿನ ಗರ್ಭಿಣಿಯರು ಅರ್ಜಿ ಸಲ್ಲಿಸಬಹುದು. ಒಂದನೇ ಗರ್ಭಿಣಿ ಪತಿ ಸರ್ಕಾರಿ, ಅರೆ ಸರ್ಕಾರಿ ನೌಕರರ ಆಗಿದ್ದರೂ ಕೂಡ ಒಂದನೇ ಗರ್ಭಿಣಿಯರು ಈ ಸೌಲಭ್ಯ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕಾರ್ಯಕರ್ತೆಯರನ್ನು ಅಥವಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

Post a Comment

Previous Post Next Post