ಸಕಲೇಶಪುರ: ರೈತರು ಅಡಿಕೆ ಬೆಳೆ ಪ್ರದೇಶ ವಿಸ್ತರಣೆ ಮಾಡಿ ಆರ್ಥಿಕವಾಗಿ ಸದೃಢರಾಗುವಂತೆ ತಾ ಪಂ ಕಾರ್ಯ ನಿರ್ವಾಣಾಧಿಕಾರಿ ಹರೀಶ ತಿಳಿಸಿದ್ದಾರೆ.
ತಾಲ್ಲೂಕಿನ ಜನ ಪರ ಜನ ಪ್ರಿಯ ಅಧಿಕಾರಿ ಹರೀಶ್ ರವರು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತಮ್ಮ ಒಂದು ಎಕ್ಕರೆ ಜಮೀನಿನಲ್ಲಿ ಅಡಿಕೆ ಬೆಳೆ ಪ್ರದೇಶ ವಿಸ್ತರಣೆ ಮಾಡಿ ₹ 88,045/-ಗಳನ್ನು ಪಡೆಯುವ ಮೂಲಕ ಆರ್ಥಿಕವಾಗಿ ಸದೃಢರಾಗ ಬಹುದಾಗಿ ತಿಳಿಸಿದ್ದಾರೆ. ಮಾಡಬೇಕಾಗಿರುವುದು ಇಷ್ಟೇ:
1. ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿದವರಾಗಿದ್ದು ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಫಲಾನುಭವಿಯಾಗಿ
ನೋಂದಾಯಿಸಿಕೊಳ್ಳಿರಿ.
2. ಒಂದು ಎಕ್ಕರೆ ಜಮೀನಿನಲ್ಲಿ 548 ಅಡಿಕೆ ಸಸಿಗಳನ್ನು ನೆಡಬೇಕಾಗುತ್ತದೆ.
3. ಗಿಡಗಳ ನಡುವಿನ ಅಂತರ 2.7 ಮೀಟರ ಇರಲಿ.
4. ಅಡಿಕೆ ಗುಂಡಿಯ ಉದ್ದ 0.75 ಮೀಟರ್ * ಅಗಲ 0.75 ಮೀಟರ್
* ಹಾಗೂ ಆಳ 0.75 ಮೀಟರ್ ಇರಬೇಕು.
5. ಗಿಡ ನೆಡುವ ಮುನ್ನ, ಗಿಡ ನೆಡುವ ವೇಳೆ ಹಾಗೂ ಗಿಡ ನೆಟ್ಟ ನಂತರ
ಹೀಗೆ ಮೂರು ಹಂತದ ಪೋಟೋಗಳನ್ನು ಗ್ರಾಮ ಪಂಚಾಯತಿ ಅಥವಾ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮೂಲಕ
ತೆಗೆಸಿಕೊಳ್ಳಬೇಕಾಗುತ್ತದೆ.
ನೀವು ಸಲ್ಲಿಸಬೇಕಾದ ದಾಖಲಾತಿಗಳು:-
1. BPL ಪಡಿತರ ಚೀಟಿ
2. ಆಧಾರ್ ಕಾರ್ಡ್
3. ಬ್ಯಾಂಕ್ ಪಾಸ್ ಪುಸ್ತಕ/ಖಾತೆ ಸಂಖ್ಯೆ
4. ಸಣ್ಣ ಹಿಡುವಳಿದಾರ ಪ್ರಮಾಣ ಪತ್ರ
5. ಪ.ಜಾ/ಪ.ಪಂಗಡದವರಾಗಿದ್ದರೆ ಜಾತಿ ಪ್ರಮಾಣ ಪತ್ರ.
ಹೆಚ್ಚಿನ ವಿವರಗಳಿಗೆ:-
ಗ್ರಾಮ ಪಂಚಾಯತಿ/ತಾಲ್ಲೂಕು ಪಂಚಾಯತಿ/ಜಿಲ್ಲಾ ಪಂಚಾಯತಿ ಅಥವಾ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿರಿ.
Tags
ಸಕಲೇಶಪುರ